ಬಂಟ್ವಾಳ:  ತಾಲೂಕಿನ  ಕಾವಳ ಪಡೂರು ಗ್ರಾಮದ ಮಧ್ವ ಶಾಲೆಯ ಸಮೀಪ ಕಿರಾಣಿ ಅಂಗಡಿಗೆ ನಿನ್ನೆ ದಾಳಿ ನಡೆಸಿದ  ಬಂಟ್ವಾಳ ಗ್ರಾಮಾಂತರ ಪೊಲೀಸರು  ಅಕ್ರಮವಾಗಿ ಮದ್ಯ ಶೇಖರಿಸಿಟ್ಟಿರುವುದನ್ನು ಪತ್ತೆ ಹಚ್ಚಿದ್ದು,ಈ ಸಂಬಂಧ ಒರ್ವನನ್ನು ಬಂಧಿಸಿದ್ದಾರೆ.          ಖಚಿತ ವರ್ತಮಾನದ ಮೇರೆಗೆ  ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್ ಐ ಪ್ರಸನ್ನ ಮತ್ತವರ ಸಿಬ್ಬಂದಿಗಳು ಈ ದಾಳಿ ನಡೆಸಿದ್ದು, ಅಂಗಡಿಯಲ್ಲಿ  ಅಕ್ರಮವಾಗಿ ಮಾರಾಟ ಮಾಡಲು ಶೇಖರಿಸಿಟ್ಟಿದ್ದ ಸುಮಾರು 3.24 ಲೀಟರ್ ಅಕ್ರಮ ಮದ್ಯ,  ಹಾಗೂ ನಗದು   400 ರೂ. ವನ್ನು   ವಶಪಡಿಸಿ, ಮಧ್ವ ನಿವಾಸಿ ಸತೀಶ್( 47) ಎಂಬಾತನನ್ನು ಬಂಧಿಸಿದ್ದಾರೆ.   ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here