

ವಿಟ್ಲ: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2019-20ನೇ ಸಾಲಿನ ಇಲಾಖಾ ವತಿಯಿಂದ ನಡೆಸಲ್ಪಟ್ಟ ನಾನಾ ಶೈಕ್ಷಣಿಕ ಚಟುವಟಿಕೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ವಿಟ್ಲ ಸೈಂಟ್ ರೀಟಾ ವಿದ್ಯಾ ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು.
ರಾಜ್ಯಮಟ್ಟದ ಕರಾಟೆ ಸ್ಪರ್ಧೆಯ ವಿಜೇತ ಧ್ಯಾನ್, ಪವನ್, ರಾಜ್ಯಮಟ್ಟದ ಈಜು ಸ್ಪರ್ಧಾ ವಿಜೇತರಾದ ಜೋಸ್ನಾ ಲೈಸಾ ಜೋನ್ಸನ್, ಜೆಸಿಕಾ ಜೋನ್ಸನ್, ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸಾಧನೆ ಮೆರೆದ ಕ್ರಿಸ್ಟಲ್ ಜ್ಯೋತಿ ಲೋಬೋ, ಹರ್ಷಿತಾ, ಕ್ಲೇರಿಸ್ ಲೋಬೊ, ಜಿಲ್ಲಾ ಮಟ್ಟದ ಆಟೋಟ ಸ್ಪರ್ಧೆಯ ವಿಜೇತರಾದ ದಿಲ್ರಾಯ್ ಮಸ್ಕರೇಸ್ಹಸ್, ಚೈತನ್ಯ, ಪ್ರಣತಿ, ಹಾರ್ದಿಕ್, ಸುಶಾಂತ್, ತೃಷಾ ಅವರನ್ನು ಅಭಿನಂದಿಸಲಾಯಿತು.
ವಿಟ್ಲ ಸೈಂಟ್ ರೀಟಾ ವಿದ್ಯಾಸಂಸ್ಥೆಯ ೮ನೇ ತರಗತಿ ವಿದ್ಯಾರ್ಥಿನಿ ಕ್ರಿಸ್ಟಲ್ ಜ್ಯೋತಿ ಲೋಬೋ ಅವರು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು, ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.







