ವಿಟ್ಲ: ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಯಲ್ಲಪ್ಪ ಎಸ್. ಅವರಿಗೆ ವರ್ಗಾವಣೆ ಆದೇಶ ಬಂದಿದ್ದು, ಈ ನಿಟ್ಟಿನಲ್ಲಿ ವಿಟ್ಲದ ಮುಸ್ಲಿಂ ಬಾಂಧವರು ಗುರುವಾರ ಪೊಲೀಸ್ ಠಾಣೆಗೆ ತೆರಳಿ ಅಭಿನಂದಿಸಿ ಬೀಳ್ಕೊಟ್ಟರು.
ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವಲ್ಲಿ ಪ್ರಾಶಸ್ತ್ಯ ನೀಡಿದ್ದ ಯಲ್ಲಪ್ಪ ಅವರು ಮಾನವೀಯತೆ, ಸರಳತೆಗೆ ಹೆಸರಾಗಿದ್ದರು. ಅವರ ಮುಂದಿನ ಜೀವನ ಯಶಸ್ಸಾಗಲಿ ಎಂದು ದ.ಕ.ಜಿಲ್ಲಾ ವಕ್ಫ್ ಸಮಿತಿ ಸದಸ್ಯರಾದ ರಶೀದ್ ವಿಟ್ಲ ಶುಭ ಹಾರೈಸಿದರು.
ವಿಟ್ಲದ ಮುಸ್ಲಿಂ ಬಾಂಧವರಾದ ಆರ್.ಕೆ. ಅಬ್ದುಲ್ಲ ಹಾಜಿ, ಅಬೂಬಕರ್ ನೋಟರಿ, ಇಕ್ಬಾಲ್ ಹೋನೆಸ್ಟ್, ಜಾಫರ್ ಖಾನ್, ವಿ.ಎಸ್. ಇಬ್ರಾಹಿಂ, ವಿ.ಕೆ. ಅಶ್ರಫ್ ಮೇಗಿನಪೇಟೆ, ಸಮೀರ್ ಪಳಿಕೆ, ಹನೀಫ್ ಕುದ್ದುಪದವು, ಇಸಾಕ್ ವಿಟ್ಲ, ಅದ್ದು ದೀಪಕ್, ಉಬೈದ್, ಕಮರುದ್ದೀನ್ ಪುಣಚ, ರಹೀಮ್ ಕುಂಡಡ್ಕ, ಅಬೂಬಕರ್ ಅನಿಲಕಟ್ಟೆ ಈ ಸಂದರ್ಭ ಉಪಸ್ಥಿತರಿದ್ದರು.

 

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here