ವಿಟ್ಲ:  ವಿಟ್ಲ ಆರಕ್ಷಕ ಠಾಣೆಯ ವ್ಯಾಪ್ತಿಯು ದೊಡ್ಡದು.ಅತ್ತ ಸಾಲೆತ್ತೂರು ಮತ್ತು ಇತ್ತ ಸಾರಡ್ಕ ,ಕನ್ಯಾನ ದಂತಹ ಗಡಿ ಪ್ರದೇಶಗಳನ್ನೊಳಗೊಂಡ, ವಿಟ್ಲ ಪೊಲೀಸ್ ಠಾಣೆಯಲ್ಲಿ ಉಪನಿರೀಕ್ಷರಾಗಿ ಅಧಿಕಾರ ಸ್ವೀಕರಿಸಿದ ಯಲ್ಲಪ್ಪನವರು ಮೊದಲ ದಿನವೇ ತಾನೊಬ್ಬ ದಕ್ಷ ,ಪ್ರಾಮಾಣಿಕ ಪೊಲೀಸ್ ಅಧಿಕಾರಿ ಎಂಬುದನ್ನು ಜನತೆಗೆ ತೋರಿಸಿಕೊಟ್ಟಿದ್ದರು.

  

‌ ತನ್ನ ಕರ್ತವ್ಯ ನಿಷ್ಠೆ ಹಾಗೂ ರಾಜನೀತಿಯಿಂದಾಗಿ ಅಲ್ಪಸಮಯದಲ್ಲೇ ವಿಟ್ಲ ಜನತೆಯ ಮನಗೆದ್ದ ಯಲ್ಲಪ್ಪನವರು ಇದೀಗ ದಾಂಡೇಲಿಗೆ ವರ್ಗಾವಣೆಗೊಂಡಿದ್ದಾರೆ.
ಒಂದು ವರ್ಷ ಮೂರು ತಿಂಗಳ ತನ್ನ ಅಧಿಕಾರಾವಧಿಯಲ್ಲಿ ವಿಟ್ಲದಲ್ಲಿ ಶಾಂತಿ ಮತ್ತು,ಕಾನೂನು ಸುವ್ಯವಸ್ಥೆಯನ್ನು ಕಾಪಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು.
ಅಂತಹ ದಕ್ಷ ಅಧಿಕಾರಿ ಸರಕಾರದ ನಿಯಮದಂತೆ ವರ್ಗಾವಣೆಯಾದಾಗ ಅನಿವಾರ್ಯ ವಾಗಿ ವಿಟ್ಲದ ಜನತೆ ಭಾರವಾದ ಹೃದಯದಿಂದ ಅವರನ್ನು ಬೀಳ್ಗೊಡುತ್ತಿದ್ದಾರೆ.ಯಲ್ಲಪ್ಪನವರ ದಕ್ಷ ಹಾಗೂ ನಿಷ್ಪಕ್ಷ ಸೇವೆಯನ್ನು ವಿಟ್ಲದ ಜನತೆ ಖಂಡಿತಾ ಮರೆಯಲಾರರು
ಅವರ ಮುಂದಿನ ಜೀವನ ಸುಖಮಯವಾಗಲೆಂದು ಹಾರೈಸುವುದರ ಜೊತೆಗೆ ಇಂತಹ ಅಧಿಕಾರಿಗಳೇ ವಿಟ್ಲಕ್ಕೆ ಬರಲಿ ಎಂದು ಇಲ್ಲಿನ ಎಲ್ಲಾ ನಾಗರಿಕರು ಆಶಿಸುತ್ತಿದ್ದಾರೆ. ಯಲ್ಲಪ್ಪನವರಿಗೆ ಶುಭ ಹಾರೈಸುತ್ತಿರುವ ವಿಟ್ಲದ ನಾಗರಿಕರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here