


ಬಂಟ್ವಾಳ: ಶಾಲೆಗೆ ಗೈರು ಹಾಜರಾದ ಮಕ್ಕಳನ್ನು ಮರಳಿ ಶಾಲೆಗೆ ಹಾಜರಾಗುವಂತೆ ಪೋಲೀಸರು ಹಾಗೂ ಶಿಕ್ಷಕರು ಮನವೊಲಿಸಿದ ಘಟನೆ ವಿಟ್ಲದಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಕೋಲ್ಪೆ ಎಂಬಲ್ಲಿಯ ಗೋಪಾಲಕೃಷ್ಙ, ಸುಂದರಿ ದಂಪತಿಯ ಮಕ್ಕಳಾದ ಶ್ರವಣ್ ಕುಮಾರ್ 7 ನೇ,ತರಗತಿ ,ನಮಿತಾ 3 ನೇ ತರಗತಿ ಇವರು ಶಾಲೆಗೆ ಗೈರು ಹಾಜರಾಗುತ್ತಿದ್ದ ಬಗ್ಗೆ ಕೋಲ್ಪೆ ಪ್ರಾಥಮಿಕ ಶಾಲೆಯ ಅದ್ಯಾಪಕರಾದ ಶ್ರೀಪತಿ ನಾಯಕ್ ,ಪ್ರವೀಣ್ ಕುಮಾರ್ ಹಾಗು ಬೀಟ್ ಸಿಬ್ಬಂದಿ ಹೆಚ್ ಸಿ ಬಾಲಕೃಷ್ಣ ಅವರು ಮಕ್ಕಳ ಮನೆಗೆ ಹೋಗಿ ಮಕ್ಕಳು ಹಾಗು ಪೋಷಕರೊಂದಿಗೆ ಮಾತನಾಡಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ತಿಳಿಸಿ ಮಕ್ಕಳ ಮನವೊಳಿಸಿದರು.
ನಾಳೆಯಿಂದ ಮಕ್ಕಳು ಶಾಲೆಗೆ ಹಾಜರಾಗುವ ಭರವಸೆ ನೀಡಿದ್ದಾರೆ.







