ರವಿ ನಿನ್ನಾಸರೆ ಈ ಧರೆಗಿಂದು
ಮೈಮನ ಮರೆಸಿಹುದು..
ತವಕದಿ ಬಂದು ಸೇರುವ ಪರಿಯು
ಸಂತಸ ತಂದಿಹುದು…
ಹಸಿರದು ಬೆಳಕನು ಪಡೆಯುತ ತಾನು
ತಲೆಯನು ತೂಗುತಿದೆ
ಗಿರಿ ಶಿಖರವು ತಾ ಮುಖವನು ಒಡ್ಡಿ
ಸ್ನಾನವ ಮಾಡುತಿವೆ..
ಹಕ್ಕಿಗಳ ಚಿಲಿಪಿಲಿ ಗಾನವು
ನಿನ್ನನೆ ಕರೆಯುತಿದೆ
ನವಿಲಿನ ಅಂದದ ನಾಟ್ಯವು ನಿನ್ನ
ಅಂದವ ಹೊಗಳುತಿದೆ…
ಹೃದಯದ ಬಡಿತವು ನಿನ್ನಿಂದಾಗಿಯೆ
ಲಯದಲಿ ಮಿಡಿಯುತಿದೆ..
ಮನದ ಭಾವನೆ ನೋಡುತ ನಿತ್ಯ
ಚಿಮ್ಮಿ ಪುಟಿಯುತಿದೆ..
@ಪ್ರೇಮ್@