Wednesday, October 18, 2023

ವಿದ್ಯಾ ಪ್ರೋತ್ಸಾಹ ಧನ ವಿತರಣೆ

Must read

ಬಂಟ್ವಾಳ:  ಕುಲಾಲ ಸುಧಾರಕ ಸಂಘ  (ರಿ) ಫರಂಗಿಪೇಟೆ ನಾಣ್ಯ ಮಾರಿಪಳ್ಳ  ಇದರ ವತಿಯಿಂದ  ಸಂಘದ ಸಮುದಾಯ ಭವನದಲ್ಲಿ  ಸಂಘದ ವ್ಯಾಪ್ತಿಗೊಳಪಟ್ಟ   ಪಿ.ಯು.ಸಿ .ಡಿಗ್ರಿ. ಸ್ನಾತಕೋತ್ತರ ಹಾಗು ವೃತ್ತಿಪರ ಕೋರ್ಸುಗಳಲ್ಲಿ  ಕಲಿಯುತ್ತಿರುವ  ಶೇಖಡಾ 65%  ಕ್ಕಿಂತ ಅಧಿಕ ಅಂಕ ಪಡೆದ  ಕುಲಾಲ ವಿದ್ಯಾರ್ಥಿಗಳಿಗೆ  ವಿದ್ಯಾ ಪ್ರೋತ್ಸಾಹ ಧನ  ನೀಡಲಾಯಿತು. ಕಾರ್ಯಕ್ರಮದ ಮುಖ್ಯಅತಿಥಿಯಾಗಿ  ಸುರಭಿ  ಸ್ಟೀಲ್ ಫೇಬ್ರಿಕೇಶನ್ ವರ್ಕ್ಸ್ ತುಂಬೆ ಇದರ ಮಾಲಕರಾದ ನವೀನ್  ಕುಮಾರ್ ಪೊನ್ನೋಡಿ   ಇವರು ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ರಾದ  ಉಮಾಚಂದ್ರಶೇಖರವರು  ಅಧ್ಯಕ್ಷ ಸ್ಥಾನದಿಂದ  ಮಾತನಾಡಿ  ದೇಶದ ಪ್ರಜ್ಞಾವಂತ ನಾಗರಿಕನಾಗಿ ಬದುಕು ನಡೆಸಲು ಶೈಕ್ಷಣಿಕ ಪ್ರಗತಿಯೇ ಮೂಲಾಧಾರ  ಮೌಲ್ಯಾಧಾರಿತ  ಶಿಕ್ಷಣದಿಂದ ಮಾತ್ರ ವ್ಯಕ್ತಿಯೊಬ್ಬರಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಲು ಸಾಧ್ಯ. ಆರ್ಥಿಕ ಬಡತನ ಶೈಕ್ಷಣಿಕ ಪ್ರಗತಿಯ ಪಥದಲ್ಲಿ ತಡೆಯಾಗಬಾರದು ಎಂದರು. ಕಾರ್ಯಕ್ರಮದಲ್ಲಿ  ಒಟ್ಟು 30 ವಿದ್ಯಾರ್ಥಿಗಳಿಗೆ  ವಿದ್ಯಾಪ್ರೋತ್ತಾಹ ಧನ ವಿತರಿಸಲಾಯಿತು. ನಂತರ  ವಿದ್ಯಾರ್ಥಿಗಳು ತನ್ನ ಅನಿಸಿಕೆಯನ್ನು  ಸಭೆಯಲ್ಲಿ   ವ್ಯಕ್ತಪಡಿಸಿದರು . ವೇದಿಕೆಯಲ್ಲಿ ಸಂಘದ ಕೋಶಾಧಿಕಾರಿ  ಬಿ.ನಾರಾಯಣ್  ಉಪಸ್ಥಿತರಿದ್ದರು. ಉಪಾಧ್ಯಕ್ಷರಾದ  ಸುರೇಶ ನೆತ್ತರಕೆರೆ  ಸ್ವಾಗತಿಸಿದರು. ವಿದ್ಯಾರ್ಥಿನಿ  ಸ್ವಾತಿ ಪೈಕಾ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಎಸ್.ವಿಶ್ವನಾಥ್ ಕುಲಾಲ್  ಇವರು ವಿದ್ಯಾಪ್ರೋತ್ಸಾಹಧನ  ಫಲಾನುಭವಿ ವಿದ್ಯಾರ್ಥಿಗಳ  ಪಟ್ಟಿಯನ್ನು ವಾಚಿಸಿದರು.ಮಹಿಳಾ ಘಟಕದ ಅಧ್ಯಕ್ಷೆ  ಕಮಲ ರಮೇಶ್ ನಾಣ್ಯ ವಂದಿಸಿದರು.  ಸದಸ್ಯರಾದ ನವೀನ್ ಚಾಪೆ ಕಾರ್ಯಕ್ರಮ ನಿರ್ವಹಿಸಿದರು.

More articles

Latest article