

ಬಂಟ್ವಾಳ: ಹೆರಿಗೆಯ ವೇಳೆ ಮಹಿಳೆಯೋರ್ವಳು ಮೃತಪಟ್ಟ ಘಟನೆ ಮಂಗಳೂರು ಖಾಸಗಿ ಆಸ್ಪತ್ರೆ ಯಲ್ಲಿ ನಡೆದಿದೆ.
ಬಂಟ್ವಾಳ ಅಜೆಕಲ ನಿವಾಸಿ ಉದಯ ಕುಲಾಲ್ ಅವರ ಪತ್ನಿ ಉಷಾ( 29) ಅವರು ಮೃತಪಟ್ಟಿದ್ದಾರೆ.
ಉಷಾ ಅವರು ಎರಡನೇ ಹೆರಿಗೆಗಾಗಿ ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆ ಯಲ್ಲಿ ಇಂದು ಬೆಳಿಗ್ಗೆ ದಾಖಲಾಗಿದ್ದರು.
ಸಂಜೆಯ ವೇಳೆ ಇವರಿಗೆ ನೋವು ಕಾಣಿಸಿಕೊಂಡಿದ್ದು ಹೆರಿಗೆಯ ಕೋಣೆಯೊಳಗೆ ಹೋಗಿದ್ದರು.
ರಾತ್ರಿ ಸುಮಾರು 8 ಗಂಟೆಯ ವೇಳೆ ಹೆರಿಗೆಯ ಇವರಿಗೆ ಯಾವುದೋ ಕಾರಣ ನೀಡಿ ಇವರ ವೈದ್ಯರು ಇವರನ್ನು ಮಂಗಳೂರು ಖಾಸಗಿ ಆಸ್ಪತ್ರೆ ಗೆ ದಾಖಲು ಮಾಡಿದ್ದಾರೆ.
ಅದರೆ ಮಂಗಳೂರು ಖಾಸಗಿ ಆಸ್ಪತ್ರೆ ಯಲ್ಲಿ ಹೋದ ವೇಳೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಉಷಾ ಅವರ ಬಾವ ತಿಳಿಸಿದ್ದಾರೆ.
ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಮನೆಯವರು ಸಾವಿಗೆ ವೈದ್ಯರು ಕಾರಣ ಎಂದು ಆರೋಪ ಮಾಡಿದ್ದಾರೆ.







