


ಮಂಗಳೂರು: ಮಂಗಳೂರು ನಗರದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಯುವಕರ ತಂಡವೊಂದನ್ನು ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಇಕಾನಾಮಿಕ್ & ನಾರ್ಕೋಟಿಕ್ ಠಾಣೆ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡಿರುತ್ತಾರೆ.
ಮಂಗಳೂರು ಸ್ಕೂಲ್ ಬುಕ್ ಕಂಪೆನಿ ಬಳಿ, ಕಾರ್ ಸ್ಟ್ರೀಟ್ ನಿವಾಸಿ ಕಿಶನ್ ಹೆಗ್ಡೆ, ಪ್ರಾಯ(19), ಮಂಗಳೂರು ಫ್ಲಾಟ್ ನಂಬ್ರ:ಜಿ1, ವಿಶ್ವಾಸ್ ಗಾರ್ಡನ್ ಆಪಾರ್ಟ್ ಮೆಂಟ್, ವಾಸ್ ಲೇನ್, ಫಳ್ನೀರ್, ನಿವಾಸಿ ಹಬೀಲ್ ಅಹಮ್ಮದ್(19), ಮಂಗಳೂರು
ಫ್ಲಾಟ್ ನಂಬ್ರ: 401, ಗೋಲ್ಡನ್ ಚೇಂಬರ್ಸ್, ಎಂಪಿಟಿ ರಸ್ತೆ, ಕಾರ್ ಸ್ಟ್ರೀಟ್, ನಿವಾಸಿ ಅನಂತ ಕುಡ್ವ(21), ಮಂಗಳೂರು
ಶ್ವೇತಾ ಶಿಲ್ಪ ಆಪಾರ್ಟ್ ಮೆಂಟ್, ವೈದ್ಯನಾಥನಗರ, ಆತ್ತಾವರ, ನಿವಾಸಿ ಗೋಪಿನಾಥ ಭಂಡಾರ್ಕರ್(24), ಬಂಧತ ಆರೋಪಿಗಳು.
ಮಂಗಳೂರು ನಗರದಲ್ಲಿ ನಿಷೇಧಿತ ಮಾದಕ ವಸ್ತುಗಳಾದ ಕೋಕೆನ್, ಎಂಡಿಎಂಎ, ಎಲ್ಎಸ್ ಡಿ, ಪಿಲ್ಸ್, ಚರಸ್ ಗಳನ್ನು ಹೊರರಾಜ್ಯಗಳಿಂದ ಖರೀದಿಸಿ ಮಂಗಳೂರಿನ ಸಾರ್ವಜನಿಕರಿಗೆ ಮಾರಾಟ ಮಾಡಿ ಅಕ್ರಮ ಹಣ ಗಳಿಸಲು ಯತ್ನಿಸುತ್ತಿರುವ ಬಗ್ಗೆ ಮಾಹಿತಿ ದೊರೆತ ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಎಂಬ ನಿಷೇದಿತ ಮಾದಕ ವಸ್ತುಗಳಾದ ಕೋಕೆನ್, ಎಂಡಿಎಂಎ, ಎಲ್ಎಸ್ ಡಿ, ಪಿಲ್ಸ್, ಚರಸ್ ವನ್ನು ಹೊಂದಿದ ಆರೋಪದ ಮೇಲೆ ಇವರನ್ನು ಬಂಧಿಸಲಾಗಿದೆ.
ಮಂಗಳೂರು ನಗರದ ಮೋರ್ಗನ್ ಗೇಟ್ ಬಳಿಯಿಂದ ಇವರನ್ನು ವಶಕ್ಕೆ ಪಡೆದುಕೊಂಡು ಅವರಿಂದ 22 ಗ್ರಾಂ ಕೋಕೆನ್, 6 ಗ್ರಾಂ ಎಂಡಿಎಂಎ, 75 ಫಿಲ್ಸ್, 5 ಎಲ್ಎಸ್ ಡಿ, 10 ಗ್ರಾಂ ಚರಸ್ ಒಟ್ಟು 2,50,000/- ಮೌಲ್ಯದ ನಿಷೇಧಿತ ಮಾದಕ ವಸ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಅಲ್ಲದೇ ಆರೋಪಿತರಿಂದ ಮೊಬೈಲ್ ಫೋನ್-3 ನ್ನು, ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಆಂದಾಜು ಒಟ್ಟು ಮೌಲ್ಯ ರೂ. 3 ಲಕ್ಷ ಆಗಿರುತ್ತದೆ. ಈ ಬಗ್ಗೆ ಇಕನಾಮಿಕ್ & ನಾರ್ಕೋಟಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾದಕ ವಸ್ತುವಿನ ಮಾರಾಟದ ಜಾಲದಲ್ಲಿ ಇನ್ನೂ ಇತರರು ಭಾಗಿಯಾಗಿದ್ದು, ಪ್ರಕರಣದಲ್ಲಿ ಹೆಚ್ಚಿನ ತನಿಖೆ ಮುಂದುವರಿದಿದೆ .
ಪೊಲೀಸ್ ಆಯುಕ್ತರಾದ ಡಾ. ಪಿ.ಎಸ್. ಹರ್ಷ, ಐ.ಪಿ.ಎಸ್, ರವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಾಗೂ ಇಕಾನಾಮಿಕ್ ಮತ್ತು ನಾರ್ಕೋಟಿಕ್ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.





