

ಉಜಿರೆ: ಸ್ಥಳೀಯ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಜೈವಿಕರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಶೆಟ್ಟಿಅವರಿಗೆ ಮಂಗಳೂರಿನ ಯೇನೆಪೋಯ ವಿಶ್ವವಿದ್ಯಾಲಯ ಪಿ.ಎಚ್ಡಿ.ಪದವಿ ಪ್ರದಾನ ಮಾಡಿ ಗೌರವಿಸಿದೆ.
ಯೇನೆಪೋಯ ಮೆಡಿಕಲ್ಕಾಲೇಜಿನ ಡಾ. ಮಂಜುಳಾ ಶಾಂತಾರಾಮ್ ಮಾರ್ಗದರ್ಶನದಲ್ಲಿ ಸ್ಥೂಲಕಾಯದ ತೊಂದರೆ ಇರುವವರಲ್ಲಿ ಜೀವರಾಸಾಯನಿಕ ಪದಾರ್ಥಗಳ ಮೇಲೆ ಆಗುವ ಪರಿಣಾಮಗಳ ಬಗ್ಯೆತುಲನಾತ್ಮಕ ವೈದ್ಯಕೀಯ ಅಧ್ಯಯನದ ಬಗ್ಯೆಇವರು ಮಂಡಿಸಿದ ಮಹಾ ಪ್ರಬಂಧಕ್ಕೆ ಪಿ.ಎಚ್ಡಿ. ಪದವಿ ಪ್ರದಾನ ಮಾಡಲಾಗಿದೆ.








