ಪುತ್ತೂರು : ಪ್ರಕೃತಿಯೊಂದಿಗಿನ ಒಡನಾಟವೂ ಮಕ್ಕಳ ಕಲಿಕೆಯ ಭಾಗವಾಗಬೇಕು ಎನ್ನುವ ಆಶಯದೊಂದಿಗೆ ಪುತ್ತೂರಿನ ಸಾಂದೀಪನಿ ವಿದ್ಯಾಸಂಸ್ಥೆ ಇತ್ತೀಚೆಗೆ
ಆಯೋಜಿಸಿದ್ದ “ನಿಲಯದ ಮಕ್ಕಳ ನಲಿವು” ಕಾರ್ಯಕ್ರಮ ಅರ್ಥಪೂರ್ಣವಾಗಿ ಮೂಡಿಬಂತು.
ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ (ರಿ) ನರಿಮೊಗರು ಇಲ್ಲಿನ ವಸತಿ ನಿಲಯದ ಮಕ್ಕಳಿಗಾಗಿ ಮುಖ್ಯೋಪಾಧ್ಯಾಯಿನಿಯಾದ  ಜಯಮಾಲ ವಿ.ಎನ್. ಇವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಮಕ್ಕಳಿಗೆ ಹೊಸಾನುಭವ ನೀಡಿತು.


*ಆರ್ಲಪದವಿನಿಂದ ಚೆಂಡೆತ್ತಡ್ಕ ಕಾಲ್ನಡಿಗೆ*

ಇನ್ನೂರೈವತ್ತು ವಿದ್ಯಾರ್ಥಿಗಳು ಹಾಗು ಹತ್ತು ಶಿಕ್ಷಕರನ್ನೊಳಗೊಂಡ ತಂಡ ಬೆಳಗ್ಗೆ 9 ಕ್ಕೆ ಸರಿಯಾಗಿ ಬೇರಿಕೆ, ಗೋಳಿತ್ತಡಿ, ದೇವಸ್ಯ, ಗಿಳಿಯಾಲು ಮಾರ್ಗವಾಗಿ ಜಾಂಬ್ರಿಗುಹೆ ಪ್ರದೇಶಕ್ಕೆ ಕಾಲ್ನಡಿಗೆಯ ಮೂಲಕ ಸಾಗಿದರು.. ಈ ಸಂಧರ್ಭದಲ್ಲಿ ರಣಮಂಗಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಲಾಯಿತು. ಆಡಳಿತ ಮೊಕ್ತೇಸರರಾದ  ಶ್ರೀಕೃಷ್ಣ ಬೋಳಿಲ್ಲಾಯ ಕಡಮಾಜೆಯವರು ಶ್ರೀ ಕ್ಷೇತ್ರದ ಬಗ್ಗೆ ಕಿರು ಪರಿಚಯ ನೀಡಿ ಮಕ್ಕಳನ್ನು ಆಶೀರ್ವದಿಸಿದರು.. ದಾರಿ ಮಧ್ಯದಲ್ಲಿ ಪ್ರಸಾದ್ ಆರ್ಲಪದವು ಹಾಗು ಗೆಳೆಯರು, ಗೋಪಾಲ ಮಣಿಯಾಣಿ ದೇವಸ್ಯ, ಗ್ರಾಮ ಪಂಚಾಯತ್ ಸದಸ್ಯರಾದ ರತ್ನಾವತಿ ಚನಿಯಪ್ಪ ನಾಯ್ಕ ಮಕ್ಕಳಿಗೆ ತಂಪು ಪಾನೀಯ ದ ವ್ಯವಸ್ಥೆ ಮಾಡಿದರು..

*ಮಾಹಿತಿ ಕಾರ್ಯಕ್ರಮ*

ಮಹಾಬಲೇಶ್ವರ ಭಟ್ ಗಿಳಿಯಾಲು ಇವರು ಜಾಂಬ್ರಿಗುಹೆ , ಕಳೆಂಜನ ಗುಂಡಿ ಹಾಗು ಸುತ್ತ ಮುತ್ತಲಿನ ಪರಿಸರದ ಹಿನ್ನೆಲೆ ಹಾಗು ಕಾರಣೀಕದ ಬಗ್ಗೆ ಮಾಹಿತಿ ನೀಡಿದರು.. ಶಾಲ ಮುಖ್ಯೋಪಾಧ್ಯಾಯರಾದ ಜಯಮಾಲ .ವಿ.ಎನ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪಾಣಾಜೆ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ರವೀಂದ್ರ ಭಂಡಾರಿ ಬೈಂಕ್ರೋಡ್ , ಬಿ.ಬಿ ಕ್ರೀಯೇಷನ್ ಇದರ ಹರೀಶ್ ಕಡಮಾಜೆ ಉಪಸ್ಥಿತರಿದ್ದರು. ಅವನಿ .ಎಸ್.ಪಿ. ಪ್ರಾರ್ಥನೆ ಹಾಡಿದಳು..

*ಗಮನ ಸೆಳೆದ ಕಲಾಕುಂಚ*
ಕಲಾವಿದ ಯೋಗೀಶ್ ಕಡಂದೇಲು ಇವರು ತಮ್ಮ ಕೈ ಚಳಕದ ಮೂಲಕ ನಿಸರ್ಗದಲ್ಲಿನ ಮಕ್ಕಳ ಆಟವನ್ನು ಸುಂದರವಾಗಿ ಚಿತ್ರಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.

*ವಿವಿಧ ಮನರಂಜನಾ ಆಟಗಳು*
ವಿದ್ಯಾರ್ಥಿಗಳಿಗೆ ನಿಧಿಶೋಧ , ಮಾಹಿತಿ ಕಲೆ ಹಾಕುವುದು, ಅದೃಷ್ಟರು ಯಾರು?, ಹಗ್ಗಜಗ್ಗಾಟ, ರಸಪ್ರಶ್ನೆ ಮುಂತಾದ ಅನೇಕ ಮನರಂಜನಾ ಆಟಗಳನ್ನು ಹಮ್ಮಿಕೊಂಡು ವಿಜೇತರಿಗೆ ಬಹುಮಾನ ನೀಡಲಾಯಿತು.
ಪ್ರಕೃತಿ ಮಡಿಲಲ್ಲಿ ನಡೆದ ಸುಂದರ ಕಾರ್ಯಕ್ರಮದಲ್ಲಿ ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಚಂದ್ರ ಎ.ಬಿ , ಸಂತೋಷ್ ರೈ ಕೋಟೆ, ದಿನೇಶ್ ಯಾದವ್ ಆರ್ಲಪದವು, ಕಾರ್ತಿಕ್ ಎಡನೀರು, ಶ್ರೀಹರಿ.ಜಿ.ಕೆ, ಪ್ರಕಾಶ್ ಕುಲಾಲ್, ಧನಂಜಯ ಆರ್ಲಪದವು , ರಜನೀಶ್ ದೇವಸ್ಯ, ಮಹೇಶ್ ಸಾಮೇಕೊಚ್ಚಿ, ಚಿದಾನಂದ ಆರ್ಲಪದವು, ಕಾರ್ತಿಕ್ ಡಿ.ಜಿ , ಇವರು ಇದರ ಯಶಸ್ವಿಗೆ ಸಹಕರಿಸಿದರು.. ಶಿವದುರ್ಗ ಆರ್ಲಪದವು ಸೌಂಡ್ಸ್ ವ್ಯವಸ್ಥೆ ಒದಗಿಸಿದರು.

ಈ ಕಾರ್ಯಕ್ರಮದಲ್ಲಿ ಸದಾಶಿವ ರೈ ಸೂರಂಬೈಲು, ಕಲ್ಲಡ್ಕ ಶ್ರೀರಾಮದ ಶಿಕ್ಷಕರಾದ ಮನೋಜ್, ನಾರಾಯಣ ನಾಯಕ್ ಅಪಿನಿಮೂಲೆ, ಪ್ರೇಮ್ ರಾಜ್ ಆರ್ಲಪದವು, ಅರುಣ್ ರೈ ಹಾಗು ಸಾಂದೀಪನಿ ಶಿಕ್ಷಕರಾದ ರಮೇಶ್ , ಮುರಳೀಕೃಷ್ಣ , ಹರೀಶ, ಪ್ರಸಾದ್ ಈಶ್ವರಮಂಗಲ, ಕಿಶಾನ್, ಶ್ರೀಪ್ರಸಾದ್ , ಮನೀಶಾ ,  ಶಶ್ಮಿತಾ,  ಯಶಸ್ವಿನಿ, ಶ್ವೇತ ,  ಹರ್ಷಿತ , ಹಿರಿಯ ವಿದ್ಯಾರ್ಥಿ ಅನಿರುದ್ದ .ಎಸ್.ಪಿ. ಸಿಬ್ಬಂದಿಗಳಾದ ಪ್ರವೀಣ್, ಸುರೇಶ್, ಶಶಿಧರ್ ಉಪಸ್ಥಿತರಿದ್ದರು..
ಸುಮಾರು ರಾತ್ರಿ ಗಂಟೆ 7 ಕ್ಕೆ ಕಾರ್ಯಕ್ರಮ ಮುಕ್ತಾಯವಾಯಿತು.  ವಿದ್ಯಾ ಅವರು ನೀರಿನ ಸೌಕರ್ಯ ಹಾಗೂ ರಾತ್ರಿಯ ಊಟದ ವ್ಯವಸ್ಥೆಯನ್ನು ಶ್ರೀಹರಿ ಎನ್ ನಡುಕಟ್ಟ ಮನೆಯರು ಒದಗಿಸಿದರು… ಬೆಳಗ್ಗಿನಿಂದ ರಾತ್ರಿಯವರೆಗೆ ನಡೆದ ಕಾರ್ಯಕ್ರಮದಲ್ಲಿ ಸಾಂದೀಪನಿ‌ ವಸತಿ‌ ನಿಲಯದಲ್ಲಿ ವಾಸ್ತವ್ಯವಿರುವ ರಾಜ್ಯದ ನಾನಾ ಭಾಗದ ವಿದ್ಯಾರ್ಥಿಗಳು ತುಳುನಾಡಿನ‌ ಮಣ್ಣಿನಲ್ಲಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here