Sunday, October 22, 2023

’ನಾರಾಯಣಗುರುಗಳು ಸಾರ್ವಕಾಲಿಕ ಬದುಕು ಶಿಕ್ಷಣ ನೀಡಿದ ಮಹಾಗುರು’

Must read

ವಿಟ್ಲ: ಉತ್ತಮ ಬದುಕಿಗೆ ಸಂಸ್ಕೃತಿ, ಸಂಸ್ಕಾರ ಬೇಕು. ಸಂಸ್ಕೃತಿಯನ್ನು ಅರಿಯಲು ಯೋಗ್ಯ ಶಿಕ್ಷಣ ಬೇಕು. ಬ್ರಹ್ಮಶ್ರೀ ನಾರಾಯಣ ಗುರುಗಳು ಪ್ರತಿಯೊಬ್ಬರಿಗೂ ಮಾನವ ಬದುಕು ಶಿಕ್ಷಣದ ವಿಚಾರಧಾರೆಗಳನ್ನು ಸಂಕೀರ್ಣ ಕಾಲಘಟ್ಟದಲ್ಲಿ ಮನದಟ್ಟು ಮಾಡಿದ ಮಹಾಗುರು ಎಂದು ಮಂಗಳೂರು ಅಖಿಲ ಭಾರತ ಪರಿಷತ್‌ನ ಇರಾ ನೇಮು ಪೂಜಾರಿ ಹೇಳಿದರು.
ಅವರು ಕುಡ್ತಮುಗೇರು ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘ, ಹಾಗೂ ಮಹಿಳಾ ಬಿಲ್ಲವ ವೇದಿಕೆ, ಕುಡ್ತಮುಗೇರು ವಲಯದ ವತಿಯಿಂದ ಭಾನುವಾರ ಮಂಕುಡೆ ಶ್ರೀ ವಿಷ್ಣುಮೂರ್ತಿ ಭಜನಾಮಂದಿರದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ ೧೬೫ನೇ ಜಯಂತಿ, ಗುರುಪೂಜಾ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಳ್ಳಾಲ ಮತ್ತು ಮಂಜೇಶ್ವರ ವಲಯ ಧರ್ಮಜಾಗೃತಿ ಅಭಿಮಾನಿ ಬಳಗದ ಅಧ್ಯಕ್ಷ ಶಿವಕೃಪಾ ಕುಂಜತ್ತೂರು ಮಾತನಾಡಿ ಮಹಾಮಾನವತಾವಾದಿಯಾದ ಬ್ರಹ್ಮಶ್ರೀ ನಾರಾಯಣ ಗುರುಗಳು ಧರ್ಮ, ಜಾತಿ, ಭಾಷೆಗಳನ್ನೆಲ್ಲಾ ಮೀರಿ ಸರ್ವ ಮನುಕುಲಕ್ಕೆ ಯೋಗ್ಯ ಜೀವನ ನಡೆಸುವ ದಿವ್ಯ ಸಂದೇಶವನ್ನು ನೀಡಿದ್ದಾರೆ. ಅವರ ವಿಚಾರ, ಸಿದ್ಧಾಂತಗಳು ಯಾವುದೇ ಕಾಲಕ್ಕೂ ಪ್ರಸ್ತುತವಾಗಿರುತ್ತದೆ ಎಂದರು.
ಬಿಲ್ಲವ ಯುವ ಶಕ್ತಿ ಸಾಮಾಜಿಕವಾಗಿಯೂ ಪ್ರದರ್ಶನವಾಗಬೇಕು. ಯುವಕಯುವತಿಯರು ಸಾಧನೆಗಳ ಮೂಲಕ ಪ್ರತಿಯೊಂದು ಕ್ಷೇತ್ರಗಳನ್ನು ಮುಂಚೂಣಿಗೆ ಬರಬೇಕು ಎಂದು ಕರ್ನಾಟಕ ಶ್ರೀನಾರಾಯಣಗುರು ವೈದಿಕ ಸಮಿತಿಯ ಮಂಗಳೂರು ಸಮಿತಿ ಪ್ರಧಾನ ಕಾರ್ಯದರ್ಶಿ ಹರೀಶ್ ಶಾಂತಿ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕುಡ್ತಮುಗೇರು ವಲಯ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ ನರ್ಕಳ ವಹಿಸಿದ್ದರುವಿಟ್ಲ ಬಿಲ್ಲವ ಸಂಘದ ಅಧ್ಯಕ್ಷ ಜಗದೀಶ ಪಾಣೆಮಜಲು, ಕೊಳ್ನಾಡು-ಸಾಲೆತ್ತೂರು ಬ್ರಹಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ ಕಟ್ಟತ್ತಿಲಕೋಡಿ, ಮಂಗಳೂರು ಪಬ್ಬುಕಟ್ಟೆ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ಕಟೀಲು ಭಾಗವಹಿಸಿದ್ದರು.
ಸಂಘದ ಗೌರವ ಅಧ್ಯಕ್ಷ ಮುಂಡಪ್ಪ ಪೂಜಾರಿ, ಸಂಘದ ಪದಾಧಿಕಾರಿ ಮಾನಿಷ್, ಮಹಿಳಾ ಬಿಲ್ಲವ ವೇದಿಕೆ ಕಾರ್ಯದರ್ಶಿ ವೇದಾವತಿ ಕುದ್ರಿಂii ಉಪಸ್ಥಿತರಿದ್ದರು.
ಸಂಘದ ಸಂಘಟನಾ ಕಾರ್ಯದರ್ಶಿ ಸುಜೀರ್ ಪೂಜಾರಿ ಸ್ವಾಗತಿಸಿದರು. ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷರ ಪ್ರಮೀತಾ ಲೋಕೇಶ್ ಪೂಜಾರಿ ವಂದಿಸಿದರು. ಸದಸ್ಯ ಸುರೇಶ್ ಪೂಜಾರಿ ಪರ್ತಿಪ್ಪಾಡಿ ವರದಿ ವಾಚಿಸಿದರು. ಪ್ರಶಾಂತ್ ಪರ್ತಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.

More articles

Latest article