Wednesday, October 25, 2023

ಉಳಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ : ದೀಪಾವಳಿ ಉತ್ಸವ

Must read

ಬಂಟ್ವಾಳ: ದೀಪಾವಳಿ ಆಚರಣೆ ಮೂಲಕ ಪ್ರತಿಯೊಬ್ಬರ ಬದುಕಿಗೂ ಪರಸ್ಪರ ಬೆಳಕಾಗಬೇಕು. ಮನುಷ್ಯರ ವ್ಯಕ್ತಿತ್ವಕ್ಕೂ ಸಂಸ್ಕಾರ ದೊರೆತಾಗ ಜೀವನದಲ್ಲಿ ಶ್ರೇಷ್ಠತೆಯನ್ನು ಸಾಽಸಬಹುದು. ದೇವಸ್ಥಾನಗಳಿಂದ ಉತ್ತಮ ಸಂಸ್ಕಾರ ದೊರೆತು ಭಗವಂತನ ಅನುಗ್ರಹ ಗಳಿಸಬಹುದು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.
ಅವರು ಬಂಟ್ವಾಳ ತಾಲೂಕು ಉಳಿ ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ರವಿವಾರ ನಡೆದ ದೀಪಾವಳಿ ಉತ್ಸವ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ದೇಗುಲದ ಪ್ರ.ಅರ್ಚಕ ನಾರಾಯಣ ಮುನ್ನೂರಾಯ, ಜಿ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್, ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಗೌರವ ಸಲಹೆಗಾರ ಮಹಾಬಲ ಶೆಟ್ಟಿ ಪಟ್ಲಗುತ್ತು, ಸಂಚಾಲಕ, ಭಾಗವತ ಸತೀಶ್ ಶೆಟ್ಟಿ ಪಟ್ಲ, ಪದಾಽಕಾರಿ ಸುದೇಶ್ ರೈ, ಹಿರಿಯ ಯಕ್ಷಗಾನ ಅರ್ಥಧಾರಿಗಳಾದ ಎಂ.ಎಲ್. ಸಾಮಗ, ಭಾಸ್ಕರ ರೈ ಕುಕ್ಕುವಳ್ಳಿ, ಉದ್ಯಮಿಗಳಾದ ಶ್ರೀಪತಿ ಭಟ್ ಮೂಡುಬಿದಿರೆ, ಜಯರಾಮ ಶೇಖ, ತಾ.ಪಂ.ಮಾಜಿ ಸದಸ್ಯ ಸಂಪತ್‌ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಸಾಮಾಜಿಕ ಚಟುವಟಿಕೆಗಳಿಗೆ ದೇವಸ್ಥಾನ ಸಮಿತಿ ವತಿಯಿಂದ ಆರ್ಥಿಕ ಸಹಾಯಧನ ವಿತರಿಸಲಾಯಿತು. ದೀಪಾವಳಿ ಉತ್ಸವ ಪ್ರಯುಕ್ತ ನಡೆದ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಅಮೆರಿಕಾ ನ್ಯೂಜೆರ್ಸಿ ಶ್ರೀ ಕೃಷ್ಣ ವೃಂದಾವನದ ಪ್ರ.ಅರ್ಚಕ ಯೋಗೀಂದ್ರ ಭಟ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಗುರುಪ್ರಕಾಶ್ ಕೊರಡಿಂಗೇರಿ ಕಾರ್ಯಕ್ರಮ ನಿರೂಪಿಸಿದರು.

More articles

Latest article