ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ, ಉಜಿರೆಯಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳು, ಬೆಳ್ತಂಗಡಿ ರೋಟರಿಕ್ಲಬ್ ಮತ್ತು ವಕೀಲರ ಸಂಘದಸಂಯುಕ್ತಆಶ್ರಯದಲ್ಲಿಎಸ್.ಡಿ.ಎಂ.ಕಲ್ಯಾಣ ಮಂಟಪದಲ್ಲಿನಡೆದಅಂತಾರಾಷ್ಟ್ರೀಯ ಫಿಡೆರೇಟೆಡ್‌ಎಸ್.ಡಿ.ಎಂ.ರೋಟೋ ಲಾಯರ್‍ಸ್‌ಕಪ್ ಮುಕ್ತ ಚೆಸ್ ಪಂದ್ಯಾಟದಲ್ಲಿಕರ್ನಾಟಕದಗಿರೀಶ್ ಎ. ಕೌಶಿಕ್ ಏಳೂವರೆ ಅಂಕಗಳೊಂದಿಗೆ ಎಸ್.ಡಿ.ಎಂ. ರೋಟೊ ಲಾಯರ್‍ಸ್‌ಕಪ್ ಹಾಗೂ ಒಂದು ಲಕ್ಷರೂ. ನಗದು ಬಹುಮಾನ ಪಡೆದರು.


ಚಕ್ರವರ್ತಿರೆಡ್ಡಿ ಎರಡನೆ ಬಹುಮಾನ ಹಾಗೂಝಾರ್ಖಂಡ್‌ನ ಸ್ವರಾಜ್ ಪಾಲಿತ್ ಮೂರನೆ ಬಹುಮಾನ ಪಡೆದರು.
ಕರ್ನಾಟಕದ ಗ್ರಾಂಡ್‌ ಮಾಸ್ಟರ್‌ ಗಿರೀಶ್ ಎ. ಕೌಶಿಕ್ ಮೂರುಡ್ರಾ ಮತ್ತುಆರು ಸುತ್ತಿನಲ್ಲಿ ವಿಜೇತರಾಗಿಅಂತಿಮ ಸುತ್ತಿನಲ್ಲಿ ತಮಿಳುನಾಡಿನ ಶೇಖರ್ ಬಿ.(ಏಳು ಅಂಕಗಳು) ಡ್ರಾ ಪಡೆದರು.
ಪ್ರಥಮ ಸ್ಥಾನಕ್ಕಾಗಿ ಗಿರೀಶ್ ಎ. ಕೌಶಿಕ್ ಮತ್ತು ಐ.ಎಂ.ಚಕ್ರವರ್ತಿರೆಡ್ಡಿ, ಎಂ.ಮಧ್ಯೆಟೈಇದ್ದರೂಆರನೇ ಸುತ್ತಿನಲ್ಲಿ ಚಕ್ರವರ್ತಿರೆಡ್ಡಿ ಸೋತುಎರಡನೆ ಸ್ಥಾನ ಪಡೆದರು.
ತಮಿಳುನಾಡಿನ ಗ್ರಾಂಡ್ ಮಾಸ್ಟರ್ ವಿಷ್ಣುಪ್ರಸನ್ನ ವಿ. 2505 ಇಎಲ್‌ಒರೇಟಿಂಗ್ ಪಡೆದರೆ, ಕರ್ನಾಟಕದ ಗ್ರಾಂಡ್ ಮಾಸ್ಟರ್‌ಗಿರೀಶ್ ಎ. ಕೌಶಿಕ್ 2501 ಇಎಲ್‌ಒರೇಟಿಂಗ್ ಪಡೆದರು.
೫ ದಿನ ನಡೆದಚೆಸ್ ಪಂದ್ಯಾಟದಲ್ಲಿ 12 ರಾಜ್ಯಗಳಿಂದ 150 ಸ್ಪರ್ಧಿಗಳು ಭಾಗವಹಿಸಿದರು.
ಪುತ್ತೂರಿನಅನಿತಾ, ವಿಟ್ಲದ ಮನಸ್ವಿನಿ, ಉಜಿರೆಯ ಆಕಾಂಕ್ಷ, ದೀಕ್ಷಾ ಮತ್ತು ದಿನೇಶ್ ಪೈ ಪಂದ್ಯಾಟದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಸೋಮವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿರೋಟರಿಜಿಲ್ಲಾ ಉಪ ರಾಜ್ಯಪಾಲ ರಿತೇಶ್ ಬಾಳಿಗಾ, ರಾಘವೇಂದ್ರ, ಮೇಜರ್‌ಜನರಲ್ ಎಂ.ವಿ. ಭಟ್, ರತ್ನವರ್ಮ ಬುಣ್ಣು, ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಲೋಬೊ, ಜಯರಾಂ, ಶ್ರೀಕೃಷ್ಣ ಶೆಣೈ, ಪ್ರತಾಪಸಿಂಹ ನಾಯಕ್ ಭಾಗವಹಿಸಿ ಬಹುಮಾನ ವಿತರಿಸಿದರು.
ಸಲೀಂ ಬೇಗ್ ಮುಖ್ಯತೀರ್ಪುಗಾರರಾಗಿ ಹಾಗೂ ಸುದೀಪ್‌ಎಸ್ ಮತ್ತು ಸಾಕ್ಷಾತ್‌ಯು.ಕೆ.ಸಹ ತೀರ್ಪುಗಾರರಾಗಿ ಸಹಕರಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here