

ವಿಟ್ಲ: ವಿಟ್ಲಪಡ್ನೂರು ಗ್ರಾಮದ ಕೊಡಂಗಾಯಿ ಅಲ್ ಅಮೀನ್ ಯೂತ್ ಫೆಡರೇಶನ್, ಕೊಡಂಗಾಯಿ ಚಾಂಪಿಯನ್ ಲೀಗ್, ಇತ್ತಿಫಾಖುಲ್ ಮುಸ್ಲಿಮೀನ್ ಚಿಲ್ಡ್ರನ್ಸ್ ಕಮಿಟಿ ಮತ್ತು ಮಂಗಳೂರು ಬ್ಲಡ್ ಡೋನರ್ಸ್ ಆಶ್ರಯದಲ್ಲಿ ಮಂಗಳೂರು ಭಾರತೀಯ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ವತಿಯಿಂದ ಎಂ.ಕೆ ಉಮ್ಮರ್ ಫಾರೂಕ್ ಕೊಡಂಗಾಯಿ ಅವರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್ ಅವರು ಸಮಾಜದಲ್ಲಿ ಸಮಾಜಮುಖಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ. ಅವುಗಳಲ್ಲಿ ರಕ್ತದಾನ ಶಿಬಿರ ಅತ್ಯಂತ ಮಹತ್ವದ ಸಮಾಜಮುಖಿ ಕಾರ್ಯವಾಗಿದೆ. ರಕ್ತದಾನ ಒಬ್ಬ ವ್ಯಕ್ತಿಯನ್ನು ರಕ್ಷಿಸುವ ಜತೆಗೆ ಆತನ ಕುಟುಂಬಕ್ಕೆ ಸಹಾಯ ಮಾಡಿದಂತಾಗುತ್ತದೆ. ಉಮ್ಮರ್ ಫಾರೂಕ್ ಹಾಗೂ ಬಾಬಣ್ಣ ಅವರು ನಡುವಿನ ಸ್ನೇಹ ಶ್ಲಾಘನೀಯವಾಗಿದೆ. ಬಾಬಣ್ಣ ಅವರಂತಹ ವ್ಯಕ್ತಿಗಳಿಂದ ಜಾತ್ಯಾತೀತೆ ಇನ್ನೂ ಗಟ್ಟಿಯಾಗಿ ಬೆಳೆಯಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಮಾಧವ ಮಾವೆ ಮಾತನಾಡಿ ಹುಟ್ಟು ಸಾವು ಸಾಮಾನ್ಯ, ಬದುಕಿದ್ದಾಗ ಮಾಡುವ ಸೇವೆ ಮಹತ್ವದು. ಪ್ರತಿಯೊಬ್ಬರು ಸಮಾಜ ಸೇವಕರಾಗಿ ಕೆಲಸ ಮಾಡಿದಾಗ ಸಮಾಜದ ಅಭಿವೃದ್ಧಿ ಸಾಧ್ಯ. ರಕ್ತದಾನ ಶಿಬಿರಗಳು ಸೌಹಾರ್ದತೆಗೆ ಸಾಕ್ಷಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಸ್ವೀಕರಿಸಿದ ವಿಟ್ಲಪಡ್ನೂರು ಗ್ರಾಮ ಪಂಚಾಯಿತಿನ ಅಧ್ಯಕ್ಷ ರವೀಶ್ ಶೆಟ್ಟಿ ಕರ್ಕಳ, ಪಿಡಿಒ ಸುಜಯ ಕೆ, ದಕ್ಷಿಣ ಕನ್ನಡ ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಬಾಬು ಕೆ.ವಿ, ಕೆಸಿಎಲ್ ವಕ್ತಾರ ಅಝರುದ್ದೀನ್ ಕೊಡಂಗಾಯಿ, ಮಾನವ ಹಕ್ಕು ಹೋರಾಟಗಾರ ಹನೀಫ್ ಸಾಹೇಬ್ ಪಾಜಪಳ್ಳ, ಪ್ರಗತಿಪರ ಕೃಷಿಕ ಜರ್ಮಿ ಕುಟಿನ್ಹ, ವಸಂತ ಶೆಟ್ಟಿ ಕಾಪುಕೋಡಿ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಅತೀ ಹೆಚ್ಚು ಭಾರೀ ರಕ್ತದಾನ ಮಾಡಿದವರನ್ನು ಹಾಗೂ ಸಮಾಜ ಸೇವಕರನ್ನು ಗೌರವಿಸಲಾಯಿತು. ಕೊಡಂಗಾಯಿ ಮಸೀದಿ ಖತೀಬು ಬಿ.ಎ ಸಿದ್ದೀಕ್ ಅರ್ಶದಿ ದುವಾಃ ಆಶೀರ್ವಚನ ನೀಡಿದರು. ೫೦ಕ್ಕಿಂತಲೂ ಅಧಿಕ ಮಂದಿ ರಕ್ತದಾನ ಮಾಡಿದರು.
ಮುಖ್ತಾರ್ ಎನ್ಎಫ್ಸಿ ಕುಂಬ್ರ, ಮಂಗಳೂರು ಬ್ಲಡ್ ಡೊನರ್ಸ್ ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ, ವಿಟ್ಲ ಪಡ್ನೂರು ಗ್ರಾಮ ಪಂಚಾಯಿತಿ ಸದಸ್ಯ ನಾಗೇಶ್ ಶೆಟ್ಟಿ ಕೊಡಂಗಾಯಿ, ವಿಟ್ಲ ಪಡ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಸಂದೇಶ್ ಶೆಟ್ಟಿ ಬಿಕ್ನಾಜೆ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಸಫ್ವಾನ್ ಮಹಮ್ಮದ್ ವಿಟ್ಲ, ಅಬೂಬಕ್ಕರ್ ಹಾಜಿ ಕೊಡಂಗಾಯಿ, ಕೆಎಂಎ ಕೊಡಂಗಾಯಿ, ಎಂಜೆಎಂ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ಕೃಷ್ಣ ನಾಯ್ಕ ಕೆ, ಸಂಘದ ಪದಾಧಿಕಾರಿಗಳಾದ ಅಬ್ದುಲ್ ರಝಾಕ್ ಎಂಕೆ, ಮಹಮ್ಮದ್ ರಫೀಕ್ ಪಿ, ನೌಶಾದ್ ಕತ್ತಾರ್, ಹಮೀದ್ ಟಿ. ಮೊದಲಾದವರು ಉಪಸ್ಥಿತರಿದ್ದರು.
ಕೆಎಂಎ ಕೊಡಂಗಾಯಿ ಸ್ವಾಗತಿಸಿ, ನಿರೂಪಿಸಿದರು. ಮಜೀದ್ ಟಿ.ಎಂ ವಂದಿಸಿದರು.








