Tuesday, October 31, 2023

ಮೈರ ಶ್ರೀ ರಾಮಾಂಜನೇಯ ಗೆಳೆಯರ ಬಳಗ: ಪರ್ಬದ ಲೇಸ್, ಜಾನಪದ ಕ್ರೀಡಾಕೂಟ

Must read

ಬಂಟ್ವಾಳ: ಬಂಟ್ವಾಳ ತಾ| ಉಳಿ ಗ್ರಾಮದ ಕಕ್ಯಪದವಿನ ಮೈರ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ನಾಲ್ಕನೇ ವರ್ಷದ ಪರ್ಬದ ಲೇಸ್, ಜಾನಪದ ಕ್ರೀಡಾ ಕೂಟ ಮೈರ ಬರ್ಕೆಜಾಲು ಗದ್ದೆಯಲ್ಲಿ ನಡೆಯಿತು.
ಪಿಡಬ್ಲ್ಯೂಡಿ ಗುತ್ತಿಗೆದಾರ ಸಂದೇಶ್ ಆಚಾರ್ಯ ದೈಕಿನಕಟ್ಟೆ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಪಿಡಬ್ಲ್ಯೂಡಿ ಗುತ್ತಿಗೆದಾರ ಪುಷ್ಪಾನಂದ ದೈಕಿನಕಟ್ಟೆ ಕ್ರೀಡಾಕೂಟವನ್ನು ಉದ್ಘಾಟಿಸಿದರು.
ಉಪ್ಪಿನಂಗಡಿ ದಂತ ವೈದ್ಯ ಡಾ. ರಾಜಾರಾಮ ಕೋಂಗುಜೆ ಅವರು ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕರಾದ ಯತೀಂದ್ರ ಚೌಟ ಗಂಪದಡ್ಡ, ಜಿನ್ನಪ್ಪ ಗೌಡ ಕೊಡಂಗೆ, ಜಯ ಪೂಜಾರಿ, ಮೈರ ಶ್ರೀ ಮಹಾಕಾಳಿ ಮಹಿಳಾ ಮಂಡಳಿ ಅಧ್ಯಕ್ಷೆ ಶೋಭಾ ಬಾಬು ಗೌಡ, ಯೋಧ ಮುರಳಿ ಪೈ ಕಕ್ಯಪದವು, ಅಂಗನವಾಡಿ ಕಾರ್ಯಕರ್ತೆ ಕುಶಲಾ, ಉಳಿ ಯುವಕ ಮಂಡಲ ಅಧ್ಯಕ್ಷ ಸನತ್ ಕಕ್ಯ, ವೇಣೂರು ಠಾಣೆ ಆರಕ್ಷಕ ಪ್ರಶಾಂತ ಮೈರ, ಆಶಾ ಕಾರ್ಯಕರ್ತೆ ಸರಸ್ವತಿ, ಗ್ರಾ.ಪಂ.ಉಪಾಧ್ಯಕ್ಷ ಸುರೇಶ್ ಮೈರ, ಸದಸ್ಯ ಚಿದಾನಂದ ರೈ, ಶ್ರೀ ರಾಮಾಂಜನೇಯ ಗೆಳೆಯರ ಬಳಗದ ಅಧ್ಯಕ್ಷ ಮಹೇಂದ್ರ ಕಾಯರ್‌ಗುರಿ , ಮಾಜಿ ಅಧ್ಯಕ್ಷ ಉಮೇಶ್ ಪೂಜಾರಿ, ಕಾರ್ಯಾಧ್ಯಕ್ಷ ಲತೀಶ್ ಕುಕ್ಕಾಜೆ, ಮಾಜಿ ಅಧ್ಯಕ್ಷ, ನ್ಯಾಯವಾದಿ ರಂಜಿತ್ ಮೈರ, ಮಹಾಕಾಳಿ ಮಹಿಳಾ ಮಂಡಲ ಮಾಜಿ ಅಧ್ಯಕ್ಷೆ ಚಂದ್ರಕಲಾ ಯತೀಂದ್ರ ಚೌಟ, ದಿನೇಶ್ ಗೌಡ ಮಾಮಯಿ, ನಾಗೇಶ್ ಗೌಡ ಮಮಯಿ, ಲಿಂಗಪ್ಪ ಗೌಡ, ಶಾಂತಪ್ಪ ಪೂಜಾರಿ , ಯೋಗೀಶ್ ಪೂಜಾರಿ ಕುಕ್ಕಾಜೆ, ಜಯಾನಂದ ಹಟದಡ್ಕ ಮತ್ತಿತರರು ಉಪಸ್ಥಿತರಿದ್ದರು.
ಗೆಳೆಯರ ಬಳಗದ ಸ್ಥಾಪಕಾಧ್ಯಕ್ಷ ಶಿವಾನಂದ ಮೈರ ಸ್ವಾಗತಿಸಿ, ವಂದಿಸಿದರು. ಸುರೇಂದ್ರ ನೇರಲ್‌ಪಲ್ಕೆ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ವಿವಿಧ ಗ್ರಾಮೀಣ ಸ್ಪರ್ಧೆಗಳು ನಡೆಯಿತು.

More articles

Latest article