

ವಿಟ್ಲ: ಕ್ಯಾಂಪ್ಕೋ ಸಂಸ್ಥೆಯ ವತಿಯಿಂದ ’ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋದ ಚಿತ್ತ’ ಯೋಜನೆಯಡಿಯಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ಸಂಸ್ಥೆಯ ಸದಸ್ಯ ಬೆಳೆಗಾರ ಇಡ್ಕಿದು ಗ್ರಾಮದ ನೇಮಕಜೆ ನರಸಿಂಹ ಪ್ರಭು ಕೆ, ಅವರಿಗೆ, ಅವರ ಸ್ವಗೃಹದಲ್ಲಿ ೫೦ ಸಾವಿರ ರೂ.ಗಳ ಚೆಕ್ಕನ್ನು ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರಾದ ಕೊಂಕೋಡಿ ಪದ್ಮನಾಭ ಭಟ್ ಹಸ್ತಾಂತರಿಸಿದರು. ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಬಿ.ಗೋಪಾಲಕೃಷ್ಣ ಭಟ್ ಮಿತ್ತೂರು, ಕ್ಯಾಂಪ್ಕೋ ಪುತ್ತೂರು ವಲಯ ಹಿರಿಯ ವ್ಯವಸ್ಥಾಪಕ ಗೋವಿಂದ ಭಟ್, ವಿಟ್ಲ ಶಾಖಾ ವ್ಯವಸ್ಥಾಪಕ ರಾಜೇಶ್.ಎಂ, ಸಿಬ್ಬಂದಿ ಜಯಪ್ರಕಾಶ್ ಉಪಸ್ಥಿತರಿದ್ದರು.








