ಉಜಿರೆ: ಧರ್ಮಸ್ಥಳದಲ್ಲಿ ಹೆಗ್ಗಡೆಯವರ ನಿವಾಸದಲ್ಲಿ (ಬೀಡಿನಲ್ಲಿ) ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವಿ. ಹೆಗ್ಗಡೆ ದಂಪತಿಗೆ ನಮೋಸ್ತು ಶಾಸನ ಸೇವಾ ಸಮಿತಿಕರ್ನಾಟಕ ವಿಭಾಗದ ವತಿಯಿಂದ ತ್ಯಾಗಿ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ನಮೋಸ್ತು ಶಾಸನ ಸೇವಾ ಸಮಿತಿಯ ಅಧ್ಯಕ್ಷರಾದ ಮೈಸೂರಿನ ತೇಜಸ್ವಿನಿ, ಕಾರ್ಯದರ್ಶಿ ಪ್ರವೀಣ್‌ಚಂದ್ರ, ಮಿತ್ರಸೇನಜೈನ್, ಉಪ್ಪಿನಂಗಡಿ ಮತ್ತು ಡಾ.ಜಯಕೀರ್ತಿಜೈನ್, ಧರ್ಮಸ್ಥಳ ಉಪಸ್ಥಿತರಿದ್ದರು.


ಮಹಾವೀರ ನಿರ್ವಾಣೋತ್ಸವ: 

ಉಜಿರೆ:  ಭಗವಾನ್ ಶ್ರೀ ಮಹಾವೀರ ಸ್ವಾಮಿ ನಿರ್ವಾಣೋತ್ಸವದ ಅಂಗವಾಗಿ ಸೋಮವಾರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಬಸದಿಗಳಲ್ಲಿ ಶ್ರಾವಕರು – ಶ್ರಾವಕಿಯರು ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here