

ಕೊನೆಗೆ ಕಂಡು ಹಿಡಿದು ಬಿಟ್ಟೇ
ಎದುರಿನ
ಮನಸ್ಸನ್ನು ಅರಿಯುವ
ರೊಬೋಟನ್ನು…!
ಅವರು ನಿಂತರೆ ಸಾಕು
ಮಾತಾಡಬೇಕೆಂದಿಲ್ಲ..
ಅವರೆದೆಯ ಮಾತೆಲ್ಲ ಅದಕ್ಕೆ ಅರ್ಥವಾಗುತ್ತಿತ್ತು.
ನಗುವಿಗೆ, ಅಳುವಿಗೆ ಕಾರಣ ಹೇಳುತ್ತಿತ್ತು.
ಮನದೊಳಗಿನ ದ್ವೇಷ, ಪ್ರೀತಿ ಎಲ್ಲಾ ಅರಿವಾಗುತ್ತಿತ್ತು.
ಅದು ಬಾಯಿಗೆ ಬಂದಂತೆ ಬೈದವನನ್ನ
ಆಲಂಗಿಸಿದ್ದು ಇದೆ
ಮುದ್ಧಿಸಿದವನಿಗೆ ಉಗಿದದ್ದು ಇದೆ.
ಕಣ್ಣೆದುರಿಗೆ ನಡೆದ ತಪ್ಪನ್ನು ಸರಿ
ಸರಿಯನ್ನು ತಪ್ಪೆಂದು
ವಾದಿಸಿದ್ದು ಇದೆ.
ಜಗಕ್ಕೆ ದುಷ್ಟ ಎನಿಸಿಕೊಂಡವನನ್ನು
ಕರುಣೆಯಿಂದ ನೋಡಿ,
ಕರುಣಾಕರ ಎಂದವನನ್ನು
ದುಷ್ಟ ಎಂದದ್ದಿದೆ.
ಅವ ತಪ್ಪು, ಇವ ಸರಿ
ಅಂದದ್ದು ಕಡಿಮೆಯೇ.
ಅವ ಕೆಟ್ಟವನು
ಇವ ಒಳ್ಳೆಯವನು
ಎಂದು ಬಣ್ಣಿಸಿದ್ದು ವಿರಳವೇ..
ಕಾರಣ ಕೇಳಿದರೆ ಅದರದ್ದು ಒಂದೇ ಮಾತು.!?
ಅವರವರ ಸ್ಥಾನದಲ್ಲಿ ನಿಂತಾಗಲೇ
ತಪ್ಪು ಸರಿ ತಿಳಿಯುವುದು..!
✍ಯತೀಶ್ ಕಾಮಾಜೆ








