


ಪುತ್ತೂರು: ಅಂತರಾಜ್ಯ ಕಳವು ಆರೋಪಿ ಯನ್ನು ಬಂಧಿಸಿದ ಪೋಲೀಸರು ಆತನ ಕೈಯಿಂದ ಕಳವುಗೈದ ಸ್ವತ್ತುಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ.
ಪುತ್ತೂರು, ವಿಟ್ಲ, ಮಿತ್ತೂರು ಸೇರಿದಂತೆ ಕಳೆದ ಕೆಲವು ಸಮಯಗಳಿಂದ ನಡೆದ ಮನೆಗಳಿಂದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಎಸ್.ಪಿ.ಲಕ್ಮೀಪ್ರಸಾದ್ ಅವರ ನಿರ್ದೇಶನದಂತೆ ಡಿವೈಎಸ್ಪಿ ದಿನಕರ ಶೆಟ್ಟಿ ಅವರ ನೇತೃತ್ವದ ತಂಡ ಅ.27ರಂದು ಬಂಧಿಸಿದ್ದಾರೆ. ಮೂಲತಃ ಕಡಬ ತಾಲೂಕು ಕೊಯಿಲ ಕಲಾಯಿ ನಿವಾಸಿ ಅಬ್ದುಲ್ ಕುಂಞ ಅವರ ಪುತ್ರ ಪ್ರಸ್ತುತ ಮಂಜೇಶ್ವರ ತಾಲೂಕಿನ ಕುಂಬ್ಳೆ ಮೊಗ್ರಾಳ್ ನಲ್ಲಿ ವಾಸ್ತವ್ಯ ಹೊಂದಿರುವ ಇಬ್ರಾಹಿಂ ಖಲಂದರ್ (31) ರವರು ಬಂಧಿತ ಆರೋಪಿ. ಪುತ್ತೂರು,ವಿಟ್ಲ,ಮಿತ್ತೂರಿನಲ್ಲಿ ಸೇರಿದಂತೆ ಹಲವು ಕಡೆ ಕಳ್ಳತನ ನಡೆದ ಪ್ರಕರಣದಲ್ಲಿದ್ದ ಪ್ರಮುಖ ಆರೋಪಿ ಈತನಾಗಿದ್ದು, ಅ.27ರಂದು ರಾತ್ರಿ ಆರೋಪಿಯನ್ನು ಪೋಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಅ.28ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಕಸ್ಟಡಿ ಪಡೆದುಕೊಳ್ಳಲಿದ್ದು, ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
ಕಾರ್ಯಚರಣೆಯಲ್ಲಿ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್, ಉಪ್ಪಿನಂಗಡಿ ಎಸ್.ಐ ನಂದಕುಮಾರ್, ಬೆಳ್ಳಾರೆ ಎಸ್. ಐ.ಈರಯ್ಯ, .ಎ.ಎಸ್.ಐ.ಗಳಾದ ಚಿದಾನಂದ ರೈ,ಶ್ರೀದರ ಮಣಿಯಾಣಿ, ಹೆಚ್.ಸಿ.ಗಳಾದ ಸ್ಕರಿಯಾ, ಜಯರಾಮ, ಜಗದೀಶ್, ವಸಂತ,ಹರಿಶ್ಚಂದ್ರ, ಅದ್ರಾಮ, ದಾಮೋದರ, ಮಂಜುನಾಥ್, ಲಕ್ಮೀಶ, ಉದಯ ರೈ ಪಿ.ಸಿ.ರಕ್ಷಿತ್, ಇರ್ಶಾದ್, ವಿನಯ, ಅನಿಲ್, ಸಂಪತ್, ದಿವಾಕರ ಮತ್ತಿತರರು ಭಾಗವಹಿಸಿದ್ದರು.







