

ವಿಟ್ಲ: ಬಂಟ್ವಾಳ ತಾಲೂಕು ಧ್ವನಿ ಮತ್ತು ಬೆಳಕು ಸಂಯೋಜಕರ ಒಕ್ಕೂಟ ಹಾಗೂ ಅಂಚೆ ಇಲಾಖೆಯ ಪುತ್ತೂರು ವಿಭಾಗ ವತಿಯಿಂದ ವಿದ್ಯಾರ್ಥಿಗಳಿಗೆ ಎರಡು ದಿನಗಳ ಆಧಾರ್ ನೋಂದಾವಣೆ, ತಿದ್ದುಪಡಿ ಶಿಬಿರ ಕಾರ್ಯಕ್ರಮ ವಿಟ್ಲ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಮತ್ತು ಶನಿವಾರ ನಡೆಯಿತು.
ವಿಟ್ಲ ಭಾಗದಲ್ಲಿ ಆಧಾರ್ ಕೇಂದ್ರಗಳು ತಾಂತ್ರಿಕ ತೊಂದರೆಯಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದರು. ಇದರಿಂದ ಸಂಘ ಶಿಬಿರ ಆಯೋಜಿಸಿದೆ. ಎರಡು ದಿನಗಳಲ್ಲಿ ಒಟ್ಟು ೪೦೦ ಮಂದಿ ಭಾಗವಹಿಸಿದರು.
ಜಿಲ್ಲಾಧ್ಯಕ್ಷ ರಾಜಶೇಖರ ಕುಡ್ತಮುಗೇರು, ದ.ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಬಾಬು ಕೆ.ವಿ, ಬಂಟ್ವಾಳ ತಾಲೂಕು ಧ್ವನಿ ಮತ್ತು ಬೆಳಕು ಸಂಜಯೋಕರ ಒಕ್ಕೂಟದ ತಾಲೂಕು ಅಧ್ಯಕ್ಷ ಶೇಕ್ ಸುಭಾನ್ ಮುನ್ನ, ಕಾರ್ಯದರ್ಶಿ ಇಸ್ಮಾಯಿಲ್, ಸಂಘಟನಾ ಕಾರ್ಯದರ್ಶಿ ಲಿಂಗಪ್ಪ ಪುಣಚ, ಕೋಶಾಧಿಕಾರಿ ಸಂತೋಷ್ ಕುಮಾರ್ ಕನ್ಯಾನ, ಸದಸ್ಯರಾದ ಫಾರೂಕ್ ಟೆಕ್ನಿಕ್, ಜಯಪ್ರಕಾಶ್, ಪ್ರಶಾಂತ್ ಕುಂಡಡ್ಕ ಮೊದಲಾದವರು ಉಪಸ್ಥಿತರಿದ್ದರು.








