(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ: ಚಿಂತನಾಶೀಲತೆ, ಮಹಾಪ್ರಯತ್ನ, ಶುದ್ಧಮನಸ್ಸಿನಿಂದ ಮಾಡಿದ ಕಾರ್ಯಗಳು ಯಾವೊತ್ತೂ ಫಲಕಾರಿಯಾಗಿ ಸಿದ್ಧಿಗೊಳ್ಳುವುದು. ಮನುಕುಲದ ಪ್ರಸಕ್ತ ಜೀವನಕ್ಕೆ ಯೋಗ್ಯತೆ, ಕ್ರೀಯಾಶೀಲತೆ ಜೊತೆಗೆ, ಉಪಾಯಗಾರಿಕೆ, ಮಂತ್ರದೊಟ್ಟಿಗೆ ತಂತ್ರಗಾರಿಕೆಯೂ ಅಗತ್ಯವಿದೆ. ಇವಕ್ಕೆಲ್ಲಕ್ಕೂ ಶ್ರೀಹರಿಯ ಅನುಗ್ರಹ ಪೂರಕವಾಗಿರಲೇ ಬೇಕು. ಆದರೆ ಭಗವಂತನ ಅನುಗ್ರಹ ಬಹಳ ಕಷ್ಟದ ಕೆಲಸ. ಇಂತಹ ಅನುಗ್ರಹಕ್ಕಾಗಿ ಮನುಷ್ಯನ ಶತಪ್ರಯತ್ನವೂ ಅಷ್ಟೇ ಅವಶ್ಯ. ಇದನ್ನು ಉಪಾಸನೆ, ಸಾಧುಸಂತರು, ಗುರುಗಳ ಮೂಲಕ ಸುಲಭ, ಸರಳವಾಗಿ ಸಿದ್ಧಿಸಲು ಸಾಧ್ಯವಾಗುವುದು. ಇದು ಒತ್ತಡದ ಬದುಕಿನ ಯುಗವಾಗಿದ್ದು ಮನುಜರು ಮಾನಸಿಕವಾಗಿ ಸದೃಢರಾಗಿದ್ದು ತಾಳ್ಮೆಯನ್ನು ರೂಢಿಸಿ ಕ್ಷಮಾಚನಾ ಗುಣ ಮೈಗೂಡಿಸಿ ಕೊಂಡಾಗಲೇ ಸಾಧ್ಯ. ಕ್ಷಮಾಸ್ತ್ರದಿಂದ ಲೋಕದ ಗೆಲುವು ಸಾಧ್ಯ. ಕ್ರೋಧ, ಮತ್ಸರ ಮುಕ್ತರಾಗಿ ಭಗವಂತನ ಚಿಂತನೆಗಳನ್ನು ಅಳವಡಿಸಿ, ರೂಪಿಸಿ, ದೇವರ ಆರಾಧನೆಕೈಗೊಂಡು ಸದಾ ಶಾಂತಚಿತ್ತಾರಾಗಿ ಬಾಳಿ ಸಾಧನಾಶೀಲರೆಣಿಸಿದಾಗಲೇ ಮಾನವ ಬದುಕು ಹಸನಾಗುವುದು ಎಂದು ಉಡುಪಿ ಶ್ರೀ ಅದಮಾರು ಮಠದ ಶ್ರೀ ಅದಮಾರು ಮಠದ ಕಿರಿಯ ಪಟ್ಟಾಧೀಶ ಶ್ರೀ ಈಶ ಪ್ರಿಯತೀರ್ಥ ಶ್ರೀಪಾದರು ತಿಳಿಸಿದರು.

ಜನವರಿ 2020ರಲ್ಲಿ ಅದಮಾರು ಮಠದ 32ನೇ ಆವೃತ್ತಿಯ ಉಡುಪಿ ಪರ್ಯಯ ಪಟ್ಟಾಧೀಶ ದೀಕ್ಷೆ ಸ್ವೀಕಾರಿಸಲಿರುವ ಈಶ ಪ್ರಿಯತೀರ್ಥರು ಪರ್ಯಾಯ ಪೂರ್ವ ಸಂಚಾರವಾಗಿಸಿ ಇಂದಿಲ್ಲಿ ಬುಧವಾರ ಸಂಜೆ ಬೃಹನ್ಮುಂಬಯಿಗೆ ಚರಣಸ್ಪರ್ಶಗೈದು ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತು ಮುಂಬಯಿ ಭಕ್ತಸಮೂಹದ ಗೌರವ ಸ್ವೀಕಾರಿಸಿ ನೆರೆದ ಭಕ್ತರಿಗೆ ಮಂತ್ರಾಕ್ಷತೆವಿತ್ತು ಆಶೀರ್ವಚನಗೈದರು.

ಅದಮಾರು ಮಠಾಧೀಶ ೧೦೮ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ ಅಪ್ಪಣೆ, ಅನುಗ್ರಹಗಳೊಂದಿಗೆ ಶ್ರೀ ಕೃಷ್ಣ ದೇವರ ಆರಾಧನೆ, ಮಠದ ಸೇವೆಯಲ್ಲಿ ತೊಡಗಿಸಿ ಕೊಳ್ಳಲು ಶ್ರೀ ಮಾಧ್ವಾಚಾರ್ಯರು ಸ್ಥಾಪಿತ ಅಷ್ಟಮಠಗಳಲ್ಲಿನ ಶ್ರೀ ಅದಮಾರು ಮಠದ ಶ್ರೀ ನರಸಿಂಹತೀರ್ಥರ ಹಾದಿಯಲ್ಲೇ ಶ್ರೀ ಕೃಷ್ಣ ಮತ್ತು ಅವರ ತತ್ತ್ವಶಾಸ್ತ್ರದಂತೆ ಮುನ್ನಡೆಯಲು ಸನ್ನದ್ಧನಾಗಿರುವೆ. ನಮ್ಮ ಪರ್ಯಾಯದಲ್ಲಿ ಪ್ರಥಮತಃ ಭಗವದ್ಭಕ್ತರಿಗೆ ಶ್ರೀಕೃಷ್ಣನ ದರ್ಶನ ಮಾಡಿಸಿ, ಎಲ್ಲರಲ್ಲೂ ಸದ್ಭಕ್ತಿ ಮೂಡಿಸುವುದೇ ನಮ್ಮ ಯೋಚನೆ ಮತ್ತು ಯೋಜನೆಯೂ ಆಗಿದೆ. ತನ್ನ ಪರ್ಯಾಯದ ಅಧಿಕಾರಾವಧಿ ಸುಗಮವಾಗಿ ನಡೆಸಲು ತಮ್ಮಂತಹ ಭಕ್ತಾಭಿಮಾನಿಗಳ ಶುಭಾರೈಗಳನ್ನು ಆಸಿಸುವೆ ಎಂದು ತನ್ನ ಪರ್ಯಾಯ ಪೂರ್ವ ಸಂಚಾರದಲ್ಲಿ ನೆರೆದ ಭಕ್ತವೃಂದವನ್ನು ಈಶ ಪ್ರಿಯತೀರ್ಥರು ಕೋರಿದರು.

 

 

ಪರ್ಯಾಯ ಪೂರ್ವ ಸಂಚಾರ ಸ್ವಾಗತ ಸಮಿತಿಯ ಬಿಎಸ್‌ಕೆಬಿ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಶ್ರೀ ಮದ್ಭ್ಭಾರತ ಮಂಡಳಿ ಮುಂಬಯಿ ಅಧ್ಯಕ್ಷ ಜಗನ್ನಾಥ್ ಪುತ್ರನ್, ಮಧ್ವ ಮಹಾ ಮಂಡಲ, ಮುಂಬಯಿ ಅಧ್ಯಕ್ಷ ಡಾ| ಎ.ಎಸ್ ರಾವ್, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ಪೂರ್ಣಪ್ರಜ್ಞ ವಿದ್ಯಾಸಂಸ್ಥೆ, ಮುಂಬಯಿ ಕಾರ್ಯಧ್ಯಕ್ಷ ಎನ್.ಹೆಚ್ ಕುಸ್ನೂರು ವೇದಿಕೆಯಲ್ಲಿ ಆಸೀನರಾಗಿದ್ದರು.

ಬಿ.ಆರ್ ಹೊಟೇಲು ಸಮೂಹದ ಆಡಳಿತ ನಿರ್ದೇಶಕ ಬಿ.ಆರ್ ಶೆಟ್ಟಿ, ಹಿರಿಯ ಪುರೋಹಿತ ಶ್ರೀ ಕೆ. ವಾಸುದೇವ ಉಡುಪ, ಶ್ರೀ ಮಹಾಶೇಷ ರುಂಡಮಾಲಿನಿ ದೇವಸ್ಥಾನ ಪಂಚಕುಟೀರ ಪೊವಾಯಿ ಇದರ ರಾಹುಲ್ ಸುವರ್ಣ, ಶ್ರೀ ಪೇಜಾವರ ಮಠ ಮುಂಬಯಿ ಇದರ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ, ಶ್ರೀ ಪಲಿಮಾರು ಮಠ ವಿರಾರೋಡ್ ಇದರ ಕೆ.ರಾಧಾಕೃಷ್ಣ ಭಟ್, ಶ್ರೀ ಸುಬ್ರಹ್ಮಣ್ಯ ಮಠ ಚೆಂಬೂರು ಇದರ ವಿಷ್ಣು ಕಾರಂತ್, ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್, ವಿದ್ವಾನ್ ಎಸ್.ಎನ್ ಉಡುಪ ಜೆರಿಮೆರಿ, ಕೃಷ್ಣರಾಜ ತಂತ್ರಿ ವಿರಾರೋಡ್, ರಾಘವೇಂದ್ರ ಉಡುಪ ಜೋಗೇಶ್ವರಿ, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‌ನ ಗೌ| ಪ್ರ| ಕಾರ್ಯದರ್ಶಿ ಎ.ಎಸ್ ರಾವ್, ಪಿ.ಕೆ.ತಂತ್ರಿ, ಹ್ಯೂಮನ್ ರೈಟ್ಸ್‌ನ ವಿಶ್ವನಾಥ ಶೆಟ್ಟಿ, ಡಾ| ಎಸ್.ಕೆ ಭವಾನಿ, ಶ್ರೀನಿವಾಸ್ ಭಟ್ ಪರೇಲ್, ಎನ್.ಆರ್ ರಾವ್, ಸಿಎ| ಸುಧೀರ್ ಆರ್.ಎಲ್ ಶೆಟ್ಟಿ, ಲಕ್ಷ್ಮೀಶ, ರಾವ್, ಕೆ.ಸಾಬಕ್ಕ, ಸುಧೀರ್ ಆರ್.ಎಲ್ ಭಟ್, ಗೀತಾ ಆರ್.ಎಲ್ ಭಟ್ ಮತ್ತಿತರ ಗಣ್ಯರು, ವಿವಿಧ ಭಜನಾ ಮಂಡಳಿಗಳಿದ್ದು ಶ್ರೀಗಳನ್ನು ಗೌರವಿಸಿದರು.

ಲೋಕಕಲ್ಯಾಣ ಮಾಡುವ ಸೇವೆಯೇ ಪರ್ಯಾಯ. ಮಧ್ವಾಚಾರ್ಯರಿಂದ ಶ್ರೀ ನರಸಿಂಹತೀರ್ಥ ಪರಂಪರೆ ಮುಂದುವರೆದ ಈ ತನಕ ನಡೆದ ಪರ್ಯಾಯಗಳು ಭಕ್ತಸಮುದಾಯದಲ್ಲಿ ಶಕ್ತಿ ತುಂಬಿದೆ. ಧಾರ್ಮಿಕ ಕೇಂದ್ರಗಳಿಂದ ಮಂದಿರ, ದೇವಸ್ಥಾನಗಳ ಮಾತ್ರವಲ್ಲ ಜನಕಲ್ಯಾಣ ಆದಾಗಲೇ ಭಗವಂತಸ ನಿಜಾರ್ಥದ ಸೇವೆ ಸಾಧ್ಯ. ಮುಚ್ಚಿಂತ್ತಾಯರು ತಿಳಿಸಿದಂತೆ ವೈಶಿಷ್ಟ್ಯದಲ್ಲೊಂದು ವೈವಿಧ್ಯಮಯ ಪರ್ಯಾಯ ಇದಾಗಲಿ ಎಂದು ಚಂದ್ರಶೇಖರ ಪೂಜಾರಿ ನುಡಿದರು.

ಪದ್ಮಾನಾಭ ಪಯ್ಯಡೆ ಮಾತನಾಡಿ ಮಠಗಳ ಮೂಲಕ ಮನುಜ ಮನಪರಿವರ್ತನೆ ಸಾಧ್ಯ. ಆದಮಾರು ಮಠವು ಶಿಕ್ಷಣ, ತಾತ್ವಿಕ ಮತ್ತು ಧಾರ್ಮಿಕ ಕ್ಷೇತ್ರಕ್ಕೆ ಅಮೂಲ್ಯವಾದ, ವಿಶಿಷ್ಟವಾದ ಕೊಡುಗೆ ನೀಡಿದೆ. ಇದೊಂದು ಆಧ್ಯಾತ್ಮಿಕ ಚಿಂತನಾ ಕೇಂದ್ರವಾಗಿದ್ದು, ವಿಶ್ವಪ್ರಿಯ ತೀರ್ಥರು ಮತ್ತು ಈಶ ಪ್ರಿಯತೀರ್ಥರ ಈ ಬಾರಿಯ ಪರ್ಯಾಯದಲ್ಲಿ ಶ್ರೀ ಕೃಷ್ಣನ ಮಾತುಗಳೇ ಉದ್ಘೋಷವಾಗಿ ಸಮಗ್ರ ಸಮಾಜ ಮತ್ತು ಸದ್ಭಕ್ತರ ಸಮೃದ್ಧಿಯಾಗಲಿ ಎಂದು ಶುಭಾರೈಸಿದರು.

ಈಶ ಪ್ರಿಯತೀರ್ಥರ ಪರ್ಯಾಯಾವಧಿಯಲ್ಲಿ ದೇಶದ ಭವಿಷ್ಯ ಪ್ರಜ್ವಲಿತವಾಗಲಿ. ಆ ಮೂಲಕ ಸರ್ವರ ಸಮೃದ್ಧಿ ಆಗಲಿ ಎಂದು ಜಗನ್ನಾಥ್ ಪುತ್ರನ್ ತಿಳಿಸಿದರು.

ಆದಮಾರು ಮಠ ನನ್ನ ಗುರುಮಠ. ಈ ಮಠಕ್ಕೆ ನಮ್ಮದು ಪರಂಪರಾಗತ ಸೇವೆಯಾಗಿದೆ. ಇಂತಹ ಪಾವಿತ್ರ ತಾ ಸೇವಾ ಅವಕಾಶ ನಮ್ಮ ಭಾಗ್ಯವಾಗಿದೆ ಎಂದು ಡಾ| ಎ.ಎಸ್ ರಾವ್ ಅಭಿಪ್ರಾಯ ಪಟ್ಟರು.

ಆದಿಯಲ್ಲಿ ಸ್ಥಳೀಯ ಲಲ್ಲುಬಾಯ್ ಪಾರ್ಕ್‌ನಿದ ಗತವೈಭವದ ಶೋಭಯಾತ್ರೆಯಲ್ಲಿ ಕುಂಭಸ್ವಾಗತದೊಂದಿಗೆ ಶ್ರೀಗಳನ್ನು ಅದಮಾರು ಮಠಕ್ಕೆ ಬರಮಾಡಿ ಕೊಳ್ಳಲಾಯಿತು. ಡಾ| ಸುರೇಶ್ ಎಸ್.ರಾವ್ ಕಟೀಲು ಮತ್ತು ವಿಜಯಲಕ್ಷ್ಮೀ ಸುರೇಶ್ ರಾವ್ ದಂಪತಿ ಸಂಪ್ರದಾಯಿಕ ಯತಿಪುರಸ್ಕಾರಗೈದರು.

ವಿದ್ವಾನ್ ಜನಾರ್ಧನ ಅಡಿಗ ಮತ್ತು ರಾಘವೇಂದ್ರ ಪೋತಿ ವೇದಘೋಷಗೈದರು. ಡಾ| ಸುರೇಶ್ ಎಸ್.ರಾವ್ ಸ್ವಾಗತಿಸಿದರು. ಅದಮಾರು ಮಠದ ಮುಂಬಯಿ ಶಾಖೆಯ ದಿವಾನ ಐ.ಲಕ್ಷ್ಮೀನಾರಾಯಣ ಮುಚ್ಚಿಂತ್ತಾಯ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು. ಅದಮಾರು ಮಠದ ಮುಂಬಯಿ ಶಾಖಾ ವ್ಯವಸ್ಥಾಪಕ ಪಡುಬಿದ್ರಿ ವಿ.ರಾಜೇಶ್ ರಾವ್ ಧನ್ಯವದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here