

ವಿಟ್ಲ: ಎಸ್ವೈಎಸ್ ಕೊಡಂಗಾಯಿ ಬ್ರಾಂಚ್ ಇದರ ವಾರ್ಷಿಕ ಮಹಾಸಭೆಯು ಕೊಡಂಗಾಯಿ ಸುನ್ನೀ ಸೆಂಟರಿನಲ್ಲಿ ನಡೆಯಿತು. ಬ್ರಾಂಚ್ ಅಧ್ಯಕ್ಷರಾದ ಪಿ ಹುಸೈನ್ ಪಳ್ಳಿಗದ್ದೆಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಎಸ್ವೈಎಸ್ ಬಂಟ್ವಾಳ ಝೋನ್ ಕಾರ್ಯದರ್ಶಿ ಕೆ.ಎಂ ಅಬ್ದುಲ್ ಹಮೀದ್ ಸಖಾಫಿಯವರು ಪ್ರಾರ್ಥನೆ ನಡೆಸಿ ಸುನ್ನೀ ಸಂಘ ಕುಟುಂಬ ಎಂಬ ವಿಷಯದಲ್ಲಿ ತರಗತಿ ನಡೆಸಿದರು.
ಸುನ್ನೀ ಸೆಂಟರ್ ಸಮಿತಿ ಅಧ್ಯಕ್ಷರಾದ ಹಾಜಿ ಹಮೀದ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಎಂಕೆಎಂ ಕಾಮಿಲ್ ಸಖಾಫಿ ಸ್ವಾಗತಿಸಿದರು. ಕಾರ್ಯದರ್ಶಿ ಅಶ್ರಫ್ ಸಅದಿಯವರು ವರದಿ ವಾಚಿಸಿದರು. ಕಾರ್ಯದರ್ಶಿ ಸಿಎಚ್ ಅಬ್ದುಲ್ ಖಾದರ್ ಲೆಕ್ಕಪತ್ರ ಮಂಡಿಸಿದರು.
ಚುನಾವಣಾ ವೀಕ್ಷಕರಾಗಿ ಆಗಮಿಸಿದ ಎಸ್ವೈಎಸ್ ವಿಟ್ಲ ಸೆಂಟರ್ ಕೋಶಾಧಿಕಾರಿ ಉಸ್ಮಾನ್ ಹಾಜಿ ಸೆರ್ಕಳರವರ, ನೇತೃತ್ವದಲ್ಲಿ ನೂತನ ಸಮಿತಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ಕೆ.ಎ ಮುಹಮ್ಮದ್ ಅಶ್ರಫ್ ಸಅದಿ ಕರ್ಕಳ ಪ್ರಧಾನ ಕಾರ್ಯದರ್ಶಿಯಾಗಿ ಎಂಕೆಎಂ ಕಾಮಿಲ್ ಸಖಾಫಿ ಕೊಡಂಗಾಯಿ ಕೋಶಾಧಿಕಾರಿಯಾಗಿ ಸಿಎಚ್ ಅಬ್ದುಲ್ ಖಾದರ್ ಚೆನಿಲ ಆಯ್ಕೆಯಾದರು.
ಟಿಂ ಇಸಾಬ ಅಮೀರ್ ಆಗಿ ಸುಲೈಮಾನ್ ದರ್ಖಾಸ್, ಉಪಾಧ್ಯಕ್ಷರಾಗಿ ಆಫೀಸು ಮತ್ತು ನಿರ್ವಹಣೆ ಬಿ.ಎಂ ಇಬ್ರಾಹೀಂ ಜಾರ, ಸಾಂತ್ವನ ಹಾಗು ಇಸಾಬಃ ವಿಭಾಗದ ಕಾರ್ಯದರ್ಶಿಯಾಗಿ ಡಿ.ಎ ಮುಹಮ್ಮದ್ ಅಶ್ರಫ್ ಕೊಡಂಗಾಯಿ ಶಿಕ್ಷಣ ಹಾಗು ದುವಾ ವಿಭಾಗದ ಕಾರ್ಯದರ್ಶಿಯಾಗಿ ಅಬ್ಬಾಸ್ ಮದನಿ, ಹಾಗೂ ಮೀಡಿಯಾ ಕಾರ್ಯದರ್ಶಿಯಾಗಿ ಇಬ್ರಾಹೀಂ ಸಅದಿರವರನ್ನು ಅಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ೧೫ ಹಾಗು ಸೆಂಟರ್ ಕೌನ್ಸಿಲರುಗಳಾಗಿ ೭ ಮಂದಿಯನ್ವು ಆರಿಸಲಾಯಿತು. ಹಾಲಿ ಪ್ರಧಾನ ಕಾರ್ಯದರ್ಶಿ ಎಂಕೆಎಂ ಕಾಮಿಲ್ ಸಖಾಫಿ ವಂದಿಸಿದರು.








