

ಬಂಟ್ವಾಳ: ಸೌತಡ್ಕ ಫರ್ನಿಚರ್ ಇವರ ಆಶ್ರಯದಲ್ಲಿ ಬಂಟ್ವಾಳ ಫ್ರೆಂಡ್ಸ್ ಸಹಯೋಗದೊಂದಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಬಂಟ್ವಾಳ ತಾಲೂಕು ಮಟ್ಟದ ಸಾಂಪ್ರದಾಯಿಕ ಗೂಡು ದೀಪ ಸ್ಪರ್ಧೆ ಬಂಟ್ವಾಳ ಬೈಪಾಸ್ ಬಳಿ ಇರುವ ಸಮಾಜ ಸೇವಾ ಸಹಕಾರಿ ಬ್ಯಾಂಕಿನ ಕೆಲ ಅಂತಸ್ತಿನ ಸಭಾಭವನದಲ್ಲಿ ನಾಳೆ ಅ.27 ರಂದು ಅದಿತ್ಯವಾರ ನಡೆಯಲಿದೆ ಎಂದು ಕಾರ್ಯಕ್ರಮದ ಆಯೋಜಕರಾದ ಸುಕುಮಾರ್ ಬಂಟ್ವಾಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸಂಜೆ 5 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಉದ್ಯಮಿ ನಾಗೇಂದ್ರ ಬಾಳಿಗಾ ಕಾರ್ಯಕ್ರಮ ಉದ್ಘಾಟಿಸುವರು.
ಸೌತಡ್ಕ ಪರ್ನಿಚರ್ ಮಾಲಕ ನಾಗೇಶ್ ಕುಲಾಲ್ ಆಧ್ಯಕ್ಷತೆ ವಹಿಸಲಿದ್ದಾರೆ.
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೋ.ತುಕರಾಂ ಪೂಜಾರಿ ದೀಪಾವಳಿ ಹಬ್ಬದ ಮಾತಗಳನ್ನಾಡಲಿದ್ದರೆ.
ಬಂಟ್ವಾಳ ನಗರ ಠಾಣಾ ಎಸ್. ಐ.ಚಂದ್ರಶೇಖರ್ ಸಹಿತ ಅನೇಕ ಗಣ್ಯರು ಕಾರ್ಯಕ್ರಮದ ಲ್ಲಿ ಅತಿಥಿಯಾಗಿ ಭಾಗವಹಸಲಿದ್ದಾರೆ.
ಸ್ಪರ್ಧೆ ಯ ನಿಯಮಗಳು ಈ ಕೆಳಗಿನಂತಿವೆ:
ಬಣ್ಣ ಕಾಗದ ಅಥವಾ ಪೇಪರ್ ಬೇಗಡೆ ಉಪಯೋಗಿಸಿ ಬೆಳಕು ಹೊರ ಚಿಮ್ಮುತಿರಬೇಕು.
ನೈಸರ್ಗಿಕ ಕಡ್ಡಿಗಳ ಮೂಲೆಗಳಿರುವ ಗೂಡುದೀಪ ಕಡ್ಡಾಯ ( ಬಾಲ ಇರಬೇಕು).
ಅದೇ ದಿನ ಸಂಜೆ 4 ಗಂಟೆಯ ಮುಂಚಿತವಾಗಿ ಗೂಡುದೀಪಗಳನ್ನು ತಂದು ಪ್ರದರ್ಶನಕ್ಕೆ ಅಣಿಗೊಳಿಸಬೇಕು.
5 ಗಂಟೆಯ ನಂತರ ಬಂದ ಸ್ಪರ್ಧೆಗಳಿಗೆ ಅವಕಾಶವಿಲ್ಲ.
ಸ್ವತಃ ತಯಾರಿಸಿದ ಗೂಡುದೀಪಗಳನ್ನು ಮಾತ್ರ ಸ್ಪರ್ಧೆಯ ಗಣನೆಗೆ ತೆಗೆದುಕೊಳ್ಳುವುದು.
ವ್ಯವಸ್ಥಾಪಕರ ನಿರ್ಣಯವೇ ಅಂತಿಮ








