

ಬಂಟ್ವಾಳ: ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕರೆಂಕಿ ಎಂಬಲ್ಲಿ ನಡೆದಿದೆ.
ಮೂಡುನಡುಗೋಡು ನಾವೂರು ಗ್ರಾಮದ ನಾಜಿ ನಿವಾಸಿ ಪೂವಪ್ಪ ಸಪಲ್ಯ (59).ಮೃತಪಟ್ಟ ವರು.
ಗ್ರಾಮದ ಕರೆಂಕಿ ಎಂಬಲ್ಲಿ ನೀರು ಹರಿದು ಹೋಗುವ ತೋಡಿನಲ್ಲಿ ಮೃತದೇಹ ಪತ್ತೆಯಾಗಿದೆ.
ಅ.24 ರಂದು ಮನೆಯಿಂದ ಪೇಟೆ ಯ ಕಡೆ ಹೋಗಿ ಬರುತ್ತೇನೆಂದು ಹೋದವರು ಮನೆಗೆ ಬಾರದೆ ಕಾಣೆಯಾಗಿದ್ದರು.
ಆದರೆ ಪೂವಪ್ಪ ಅವರು ಅವರ ಮಗಳ ಮನೆಗೆ ಹೋಗಿರಬಹುದು ಎಂದು ಅವರಿಗೆ ಪೋನ್ ಮಾಡಿದಾಗ ಅವರ ಮನೆಗೆ ಬಂದಿಲ್ಲ ಎಂದು ಅವರು ಹೇಳಿದರು.
ಬಳಿಕ ಸುತ್ತಮುತ್ತಲೂ ಹುಡುಕಾಡಿದರೂ ಸಿಗಲಿಲ್ಲ.
ಇಂದು ಮಧ್ಯಾಹ್ನ ದ ವೇಳೆ ಕರೆಂಕಿ ತೋಡಿನಲ್ಲಿ ಇವರ ಮೃತದೇಹ ಪತ್ತೆಯಗಿದ್ದು , ಕಾಲು ಜಾರಿ ಮೃತಪಟ್ಟಿರಬೇಕು
ಮಗ ಮಹೇಶ್ ಅವರು ತಿಳಿಸಿದ್ದಾರೆ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್. ಐ.ಪ್ರಸನ್ನ ಹಾಗೂ ಸಿಬ್ಬಂದಿ ಗಳು ಬೇಟಿ ನೀಡಿದ್ದಾರೆ.







