


ಬಂಟ್ವಾಳ: ಇಂದು ಸುರಿದ ಬಾರೀ ಗಾಳಿ ಮಳೆಗೆ ಮೂರು ಮನೆಗಳಿಗೆ ಹಾನಿಯಾದ ಘಟನೆ ಸಾಲೆತ್ತೂರು ಗ್ರಾಮದಲ್ಲಿ ನಡೆದಿದೆ.
ಸಾಲೆತ್ತೂರು ಗ್ರಾಮದ ಕೊಳ್ನಾಡು ಪ್ರದೇಶದಲ್ಲಿ ಮಧ್ಯಾಹ್ನ 12.30 ರ ಸಮಯದಲ್ಲಿ ಸಂಭವಿಸಿದ ಭೀಕರ ಸುಂಟರಗಾಳಿಗೆ ಒಂದೇ ಪ್ರದೇಶದ ಮೂರು ಮನೆಗಳ ಮೇಲೆ ಮರ ಕುಸಿದು ಬಿದ್ದಿರುತ್ತದೆ.
ಮರ ಬಿದ್ದು ಮನೆಯ ಹಂಚು ಹಾಗೂ ಸಿಮೆಂಟ್ ಸೀಟುಗಳಿಗೆ ಹಾನಿಯಾಗಿದೆ. ಕೊಳ್ನಾಡು ನಿವಾಸಿಗಳಾದ ಸುಂದರ ಪೂಜಾರಿ, ಅಬ್ದುಲ್ ಖಾದರ್ ಮತ್ತು ಆನಂದ ಪೂಜಾರಿ ಎಂಬವರ ಮನೆಗಳಿಗೆ ಮರ ಬಿದ್ದು ಹಾನಿಯಾಗಿದೆ.
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್.ಆರ್. ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






