Wednesday, October 25, 2023

ಕುಡ್ತಮುಗೇರು: ಧಾರ್ಮಿಕ ಸಭೆ, ಸನ್ಮಾನ

Must read

ವಿಟ್ಲ: ಸಂಘಟನೆಗಳು ಬಲಗೊಂಡಾಗ ಸಮಾಜದ ಅಭಿವೃದ್ಧಿ ಸಾಧ್ಯ. ಸರಕಾರದಿಂದ ದೊರೆಕುವ ಅನುದಾನಗಳನ್ನು ಸಂಘಟನೆಗಳು ಸದುಪಯೋಗ ಪಡೆಸಿಕೊಳ್ಳಬೇಕು ’ ಎಂದು ದ ಕ ಜಿ ಪಂ ಸಹಾಯಕ ಕಾರ್ಯದರ್ಶಿ ಸಚಿನ್ ಕುಮಾರ್ ಹೇಳಿದರು.
ಅವರು ಕುಡ್ತಮುಗೇರು ವಿಜಯಶ್ರೀ ಕಲ್ಯಾಣ ಮಂಟಪದಲ್ಲಿ ಪದ್ಮಶಾಲಿ ಸೇವಾ ಸಮಿತಿ ಕಾಡುಮಠ, ವಿಟ್ಲ ವಲಯದ ಆಶ್ರಯದಲ್ಲಿ ಜರಗಿದ ೭ ನೇ ವರ್ಷದ ಸತ್ಯನಾರಾಣ ಪೂಜೆಯ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮಾತಾಡಿದರು. ಈ ಸಂದರ್ಭದಲ್ಲಿ ಕಿರುತೆರೆ ಮತ್ತು ಚಲನಚಿತ್ರ ಬರಹಗಾರ ಚಂದ್ರಶೇಖರ ಡಿ.ಬಿ ಅವರನ್ನು ಸನ್ಮಾನಿಸಲಾಯಿತು. 2018-19 ನೇ ಸಾಲಿನ ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸ್ವಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಮಿತಿಯ ಅಧ್ಯಕ್ಷ ತುಕಾರಾಮ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬಂಗ್ರಮಂಜೇಶ್ವರ ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದ ಅಧ್ಯಕ್ಷ ನಾರಾಯಣ ಶೆಟ್ಟಿಗಾರ್ ಬೋರ್ಕಳ, ಬಾಬು ಶೆಟ್ಟಿಗಾರ ಕೋಕಳ ಭಾಗವಹಿಸಿದ್ದರು. ಯುವ ವೇದಿಕೆ ಅಧ್ಯಕ್ಷ ಹರಿಚ್ಶಂದ್ರ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಶಂಕರ ಶೆಟ್ಟಿಗಾರ ಮಾವೆ ಸ್ವಾಗತಿಸಿದರು. ಕಾರ್ಯದರ್ಶಿ ವರದರಾಜ ಎಂ. ಇರಾ ವರದಿ ವಾಚಿಸಿದರು. ಮನೋರಂಜನ್ ಕರೈ ಪ್ರತಿಭಾ ಪುರಸ್ಕಾರ ನಡೆಸಿಕೊಟ್ಟರು. ಕ್ರೀಡಾ ಕಾರ್ಯದರ್ಶಿ ಶರತ್ ಕಾಡುಮಠ ವಂದಿಸಿದರು. ಲೋಕರಾಜ್ ವಿ ಎಸ್ ನಿರೂಪಿಸಿದರು.

More articles

Latest article