ಮಂಗಳೂರು: ಮಹಾರಾಷ್ಟ್ರ ಚುನಾವಣೆಯಲ್ಲಿ ಅನರ್ಹರ ಶಾಸಕರಿಗೆ ಸೋಲು ಅಗಿದೆ ಅದರೆ ಈ ಮಹಾರಾಷ್ಟ್ರ ಫಲಿತಾಂಶ ರಾಜ್ಯದಲ್ಲಿ ಎಫೆಕ್ಟ್ ಆಗಲ್ಲ ಎಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.

ರಾಜ್ಯದ ಉಪ ಚುನಾವಣೆಯಲ್ಲಿ 15 ಸ್ಥಾನಗಳನ್ನೂ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ‌

ಕಾಂಗ್ರೆಸ್, ಜೆಡಿಎಸ್ ಯಾವ ಸ್ಥಿತಿಯಲ್ಲಿದೆ ಅನ್ನೋದು ಎಲ್ಲರಿಗೂ ಗೊತ್ತಲ್ಲ , ಬೈ ಎಲೆಕ್ಷನ್ನಲ್ಲಿ ಬಿಜೆಪಿಗೆ ಎದುರಾಳಿಯೇ ಇರಲ್ಲ ಎಂಬ ವಿಶ್ವಾಸದ ಮಾತು ಆಡಿದರು.

ಸರಕಾರದ ಬಳಿ ದುಡ್ಡಿಲ್ಲ ಎಂಬ ಸಚಿವ ಸಿಸಿ ಪಾಟೀಲ್ ಹೇಳಿಕೆಗೆ ಸಮರ್ಥನೆ ನೀಡಿದ ಡಿಸಿಎಂ ಅಶ್ವಥ್ ನಾರಾಯಣ ಅವರು

40 ಸಾವಿರ ಕೋಟಿ ಸಾಲ ಮನ್ನಾಕ್ಕಾಗಿ ಹಣ ತೊಡಗಿಸಬೇಕಿದೆ ಹಿಂದಿನ ಸರಕಾರ ಕೇವಲ 15 ಸಾವಿರ ಕೋಟಿಯಷ್ಟೇ ಕೊಟ್ಟಿದೆ

ಈ ಬಾರಿ ನೆರೆಯೂ ಬಂದಿರುವುದರಿಂದ ಹಣ ಹೊಂದಿಸಬೇಕಾಗಿದೆ ಹೀಗಾಗಿ ಹೊಸ ಯೋಜನೆ ಕೈಗೊಳ್ಳಲು ಈ ಬಜೆಟಿನಲ್ಲಿ ಹಣ ಸಾಕಾಗಲ್ಲ ಎಂದು ಸ್ಪಷ್ಟಪಡಿಸಿದರು.

ಐಟಿ ದಾಳಿಯಲ್ಲಿ ಮೆಡಿಕಲ್ ಸೀಟು ಬ್ಲಾಕಿಂಗ್ ಪತ್ತೆ ವಿಚಾರ :

ರಾಜ್ಯದಲ್ಲಿ ಸೀಟ್ ಬ್ಲಾಕಿಂಗ್ ವಿಷ್ಯನೇ ಇಲ್ಲ ಅಕ್ರಮ ಆಸ್ತಿ ವಿಚಾರದಲ್ಲಿ ಐಟಿಯವರು ರೈಡ್ ಮಾಡಿದ್ದಾರೆ. ಮೆರಿಟ್ ಸೀಟು ಭರ್ತಿಯಾಗದಿದ್ದರೆ ಭರ್ತಿ ಮಾಡಿಕೊಳ್ಳಲು ಅವಕಾಶವಿದೆ ಸರಕಾರದ ಒಡಂಬಡಿಕೆ ಪ್ರಕಾರ ಸೀಟು ಭರ್ತಿ ಮಾಡಿಕೊಳ್ಳಬಹುದು.

ಸೀಟ್ ಬ್ಲಾಕಿಂಗನ್ನು ಪರೋಕ್ಷವಾಗಿ ಒಪ್ಪಿಕೊಂಡ ವೈದ್ಯಕೀಯ ಶಿಕ್ಷಣ ಸಚಿವ ಪರಮೇಶ್ವರ್ ಐಟಿ ದಾಳಿ ವೇಳೆ ಬೆಂಗಳೂರಿನಲ್ಲಿ ಸೀಟ್ ಬ್ಲಾಕಿಂಗ್ ಬಗ್ಗೆ ಎಫ್ಐಆರ್ ಆಗಿತ್ತು ಎಂದು ಅವರು ಹೇಳಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here