ಬಂಟ್ವಾಳ: ತಾಲೂಕಿನ ಸರಪಾಡಿ ಸಮೀಪದ ಬಾಚಕೆರೆ ಶ್ರೀದುರ್ಗಾ ಪರಮೇಶ್ವರೀ ದೇವಸ್ಥಾನದ ಕಾಣಿಕೆ ಡಬ್ಬಿಯಿಂದ ನಗದು ಹಣವನ್ನು ದೋಚಿರುವ ಘಟನೆ ಸಂಭವಿಸಿದೆ. ಕುಂಟಾಲಪಲ್ಕೆ ನಿವಾಸಿ ಮುಸ್ತಾಫ ಎಂಬಾತ ಈ ಕಳವು ಕೃತ್ಯ ನಡೆಸಿದ್ದಾನೆ.ಈತ ಮಧ್ಯರಾತ್ರಿ ಸುಮಾರು 12 ಗಂಟೆಯ ವೇಳೆಗೆ ದೇವಸ್ಥಾನದ ಗೇಟ್ ಹಾರಿ ತಾನು ತಂದಿದ್ದ ಕತ್ತಿಯಿಂದ ಕಾಣಿಕೆ ಡಬ್ಬಿಯ ಬೀಗವನ್ನು ಮುರಿದು ಅದರಲ್ಲಿದ್ದ ನಗದು ಹಣವನ್ನು ದೋಚಿದ್ದಾನೆ.ಹಾಗೆಯೇ ದೇವಸ್ಥಾನದ ಅವರಣದೊಳಗೊದ್ದ ಮತ್ತೊಂದು ಕಾಣಿಕೆ ಡಬ್ಬಿಯ ಬೀಗವನ್ನು ಮುರಿಯಲು ಯತ್ನಿಸಿ ಸಾಧ್ಯವಾಗದೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ.ಆರೋಪಿ ಮುಸ್ತಾಫ ದೇವಸ್ಥಾನಕ್ಕೆ ಬರುವಲ್ಲಿಂದ ಕಾಣಿಕೆಡಬ್ಬಿ ಮುರಿದು ನಗದು ದೋಚುವವರೆಗಿನ ಕೃತ್ಯ ದೇವಳದ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ.ಇದರ ಆಧಾರದಲ್ಲಿ ಆರೋಪಿಯ ಗುರುತು ಪತ್ತೆಹಚ್ಚಲಾಗಿದ್ದು,ಘಟನೆಯ ಬಗ್ಗೆ ದೂರು ದಾಖಲಿಸಿರುವ ಬಂಟ್ವಾಳ ಗ್ರಾಮಾಂತರ ಪೊಲೀಸರು ಆರೋಪಿಯ ಬಂಧನ ಕಾರ್ಯಾಚರಣೆಗಾಗಿ ಅತನ ಮನೆಗೂ ಶುಕ್ರವಾರ ಬೆಳಿಗ್ಗೆ ದಾಳಿ ನಡೆಸಿದ್ದರಾದರೂ,ಆತನ ಸುಳಿವು ಸಿಗದೆ ಬರಿಗೈಯಲ್ಲಿ ವಾಪಾಸ್ಸಾಗಿದ್ದಾರೆ. ಈ ಬಗ್ಗೆ ಸುಂದರ ಬಾಚಕೆರೆ ಅವರ ದೂರಿನನ್ವಯ ಬಂಟ್ವಾಳ ಗ್ರಾಮಾಂತರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಈ ಹಿಂದೆ ಇಲ್ಲಿನ ಪೆರಿಯಪಾದೆ ಎಂಬಲ್ಲಿ ದೈವಸ್ಥಾವೊಂದರ ಕಾಣಿಕೆ ಡಬ್ಬಿಯನ್ನು ಕಳವುಗೈದು ಸಿಕ್ಕಿಬಿದ್ದಿದ್ದ ಎನ್ನಲಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here