

ಬಂಟ್ವಾಳ: ಕ್ಯಾರ್ ಚಂಡಮಾರುತದ ಭಾರೀ ಗಾಳಿ ಮಳೆಗೆ ಬಂಟ್ವಾಳ ತಾಲೂಕಿನ ವಿವಿಧ ಕಡೆಗಳಲ್ಲಿ ಹಾನಿಯಾಗಿದ್ದು ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಹಶೀಲ್ದಾರ್ ರಶ್ಮಿ. ಎಸ್.ಆರ್ ತಿಳಿಸಿದ್ದಾರೆ.
ತಾಲೂಕಿನ ಸುಮಾರು 12 ಮನೆಗಳಿಗೆ ಹಾನಿಯಾಗಿದ್ದು ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್.ಆರ್.ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಸೂಕ್ತ ರೀತಿಯಲ್ಲಿ ಕ್ರಮಗಳನ್ನು ಕೈಗೊಂಡಿದ್ದಾರೆ.
ಬಂಟ್ವಾಳ ತಾಲೂಕಿನ ಸಾಲೆತ್ತೂರು ಗ್ರಾಮದ ಅಬ್ದುಲ್ ಖಾದರ್, ಅಳಿಕೆ ಗ್ರಾಮದ ಶಶಿಧರ ಮತ್ತು ಅಜ್ಜಿ ಬೆಟ್ಟು ಗ್ರಾಮದ ಶ್ರೀಯಾಳ ಅವರ ಮನೆ ತೀವ್ರ ವಾಗಿ ಹಾನಿಯಾಗಿದೆ. ಉಳಿದಂತೆ
ಸಜೀಪ ಮೂಡ ಗ್ರಾಮದ ಭಾತಿಶ್, ಸಜೀಪ ಮೂಡ ಗ್ರಾಮದ ಆಲಿಯಬ್ಬ,
ಅವ್ವಬ್ಬ, ಇಡ್ಕಿದು ಗ್ರಾಮದ ಸುರೇಶ್ ಅಮೀನ್, ಸಾಲೆತ್ತೂರು ಗ್ರಾಮದ ಆನಂದ ಪೂಜಾರಿ, ಸುಂದರ ಪೂಜಾರಿ, ವಿಟ್ಲಪಡ್ನೂರು ಬಾಬು ಪುರುಷ, ಕೊಳ್ನಾಡು ಗ್ರಾಮದ ವಸಂತ, ಹಾಗೂ ಇಡ್ಕಿದು ಗ್ರಾಮದ ಅರ್ಕೆಚ್ಚಾರು ಸಂಕಪ್ಪ ಅವರ ಮನೆ ಭಾಗಶಃ ಹಾನಿಯಾಗಿದೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.








