

ದ ಕ ಜಿ ಪ ಪುದು ಮಪ್ಲ ಹಿರಿಯ ಪ್ರಾಥಮಿಕ ಶಾಲೆ ಪರಂಗಿಪೇಟೆ ಸಮುದಾಯದತ್ತ ಶಾಲೆ ಹಾಗೂ ಸೈಕಲ್ ವಿತರಣೆ ಕಾರ್ಯಕ್ರಮವು ನಡೆಯಿತು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಹಾಗೂ ಟುಡೇ ಫೌಂಡೇಶನ್ ನ ಅಧ್ಯಕ್ಷರಾದ ಉಮರ್ ಫಾರೂಕ್ ಫರಂಗಿಪೇಟೆರವರು ಸರ್ಕಾರ ನೀಡುವಂತಹ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣವನ್ನು ಪಡೆಯಬೇಕು ಮತ್ತು ಮಕ್ಕಳ ಪೋಷಕರ ನಿರಂತರ ಶಾಲೆಯ ಸಂಪರ್ಕವನ್ನು ಇಟ್ಟುಕೊಳ್ಳುವುದರ ಮುಖಾಂತರ ಶಾಲೆಯ ಎಲ್ಲಾ ರೀತಿಯ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಮಲಾನ್ ಕುಂಪನ ಮಜಲು ವಹಿಸಿದ್ದರು ಶಾಲಾ ಶಿಕ್ಷಕಿ ಶಕುಂತಲಾ ಸ್ವಾಗತಿಸಿದರು ಹಾಗೂ ಪ್ರಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರಾದ ಹನೀಫ್ ಅಮೆಮಾರ್, ರಜಾಕ್, ಟುಡೇ ಫೌಂಡೇಶನ್ ಸದಸ್ಯರಾದ ಮಜಿದ್ ಪರಂಗಿಪೇಟೆ ಹಾಗೂ ಅಬೂಬಕ್ಕರ್ ಫರಂಗಿಪೇಟೆ ಪ್ರಭಾ ಟೀಚರ್ ಹಾಗು ಸಮೀರ್ ಕುಂಪನಮಜಲ್ ಹಾಗೂ ಇತರರು ಭಾಗವಹಿಸಿದ್ದರು ಜ್ಯೋತಿ ಟೀಚರ್ ಕಾರ್ಯಕ್ರಮವನ್ನು ನಿರೂಪಿಸಿದರು ಸುನಿತಾ ಟೀಚರ್ ವಂದಿಸಿದರು







