

ಬಂಟ್ವಾಳ: ತಾಲೂಕು ಮಟ್ಟದ ಆಚರಣಾ ಸಮಿತಿ ಗಳ ವತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ಆಚರಣೆ ಕಾರ್ಯಕ್ರಮ ಬಿಸಿರೋಡಿನ ಮಿನಿವಿಧಾನ ಸೌಧದಲ್ಲಿ ನಡೆಯಿತು.
ತಹಶೀಲ್ದಾರ್ ರಶ್ಮಿ. ಎಸ್.ಆರ್.ಕಾರ್ಯಕ್ರಮ ಉದ್ಘಾಟಿಸಿ ದರು.
ಬಳಿಕ ಮಾತನಾಡಿದ ಅವರು ಕಿತ್ತೂರು ರಾಣಿ ಚೆನ್ನಮ್ಮ ಅವರ ಧೈರ್ಯ ವೇ ನಮಗೆ ಈಗಿನ ಕಾಲದಲ್ಲಿ ಪ್ರೇರಣೆ ಯಾಗಿದೆ.ಒಗ್ಗಟ್ಟಿನ ಮೂಲಕ ಸಾಧನೆ ಮಾಡಬಹುದು ಎಂಬುದನ್ನು ಅ ತೋರಿಸಿದ ಅವರ ಅನೇಕ ನಿದರ್ಶನಗಳು ನಮಗೆ ಸ್ಪೂರ್ತಿ ಯಾಗಿದೆ. ಪ್ರಸ್ತುತ ದಿನಗಳಲ್ಲಿ ಕಿತ್ತೂರು ಚೆನ್ನಮ್ಮ ದೇಶ ಭಕ್ತಿಯ ಪ್ರೇರಕ ಶಕ್ತಿ ಯಾಗಿ ಗುರುತಿಸಲ್ಪಡುತ್ತಾರೆ ಎಂದು ಅವರು ಹೇಳಿದರು.
ಉಪತಹಶೀಲ್ದರ್ ಶ್ರೀಧರ್ ಮಾತನಾಡಿ ಶೌರ್ಯ ಕ್ಕೆ ಹೆಸರು ಕಿತ್ತೂರು ರಾಣಿ ಚೆನ್ನಮ್ಮ. ಯುದ್ದದಲ್ಲಿ ಪರಿಣತಿ ಯಾಗಿದ್ದ ಚೆನ್ನಮ್ಮ ಅವರಿಂದ ಕಿತ್ತೂರಿಗೆ ಮಾತ್ರವಲ್ಲ,ಇಂದು ದಿನಾಚರಣೆ ಅಚರಿಸುವ ಮಟ್ಟಕ್ಕೆ ಹೆಸರು ಮಾಡಿದ ಹೆಸರಾಂತ ಮಹಿಳೆ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಕೇಂದ್ರ ಸ್ಥಾನೀಯ ಉಪತಹಶೀಲ್ದರ್ ರಾಧಾಕೃಷ್ಣ, ಸರ್ವೇ ಇಲಾಖೆಯ ರಮಾದೇವಿ, ಪ್ರಭಾರ ಉಪತಹಶೀಲ್ದರ್ ಸೀತಾರಾಮ ಉಪಸ್ಥಿತರಿದ್ದರು.
ಪ್ರಥಮ ದರ್ಜೆ ಸಹಾಯಕ ಪ್ರಸನ್ನ ಕುಮಾರ್ ಸ್ವಾಗತಿಸಿ, ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು ವಂದಿಸಿದರು.
ಕಂದಾಯ ನಿರೀಕ್ಷಕ ರಾಮಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.








