ಬಂಟ್ವಾಳ: ಕತ್ತಲೆ ಅವರಿಸಿದ್ದನ್ನು ಒಂದು ಚಿಕ್ಕ ದೀಪದಿಂದ ಬೆಳಕನ್ನು ಮೂಡಿಸಬಹುದು ಅದೇ ರೀತಿ ಸಮಾಜದ ಅಶಕ್ತರ ಬಾಳಿನ ಅಂಧಕಾರವನ್ನು ಹೋಗಲಾಡಿಸಿ ಬೆಳಕನ್ನು ಮೂಡಿಸುವ ಸಲುವಾಗಿ ಬಂಟ್ವಾಳದ ಅಮ್ಟಾಡಿಯ ಹಳ್ಳಿಯಲ್ಲಿ ಕಳೆದ ಒಂದು ವರ್ಷದ ಹಿಂದೆ ತುಡರ್ ಸೇವಾ ಟ್ರಸ್ಟ್(ರಿ.) ಅನ್ನುವ ಸಂಸ್ಥೆಯು ಹುಟ್ಟುಕೊಂಡಿತ್ತು ಇದರ ಪ್ರಥಮ ವರ್ಷದ ವಾರ್ಷಿಕೋತ್ಸವ ಅ.20ನೇ ಆದಿತ್ಯವಾರ ಬಂಟ್ವಾಳ ಕೆಂಪುಗುಡ್ಡೆಯ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆಯಿತು.

ಸಭಾ ಕಾರ್ಯಕ್ರಮದ ವೇದಿಕೆಯಲಿ ಕಾರ್ಕಳದ ವಿಜೇತ ವಿಶೇಷ ಶಾಲೆಯ ಸ್ಥಾಪಕಿ ಡಾ| ಕಾಂತಿ ಹರೀಶ್, ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ಅಧ್ಯಕ್ಷರಾದ ನವೀನ್ ಪಿ ಮಿಜಾರ್, ಪ್ರತಾಪ್ ಭಾರದ್ವಾಜ್, ಹರೀಶ್ ಶೆಟ್ಟಿ ಪಡ್ರೆ ಮತ್ತು ತುಡರ್ ಸೇವಾ ಟ್ರಸ್ಟ್(ರಿ.) ಗೌರವಾಧ್ಯಕ್ಷ ತಿಲಕ್ ಪೂಜಾರಿ ಪಡೀಲ್, ನಿಶ್ಚಿತ್ ಮತ್ತಿತರರು ಉಪಸ್ಥಿತರಿದ್ದರು. ನಂತರ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಸಮಾಜದ ಆಯ್ದ ಅಶಕ್ತರಾದ ಸುರೇಶ್ ಜೋಡುಕಲ್ಲು, ಅಶ್ವಿತ ಗುರುಪುರ, ರಮಿತ್ ಕೂರಿಯಾಳ ಮತ್ತು ಆನಂದ ಪೂಜಾರಿ ಇವರಿಗೆ ಆರ್ಥಿಕ ಸಹಾಯ ಹಾಗೂ ಕಾರ್ಕಳದ ಪರಪ್ಪುನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜೇತ ವಿಶೇಷ ಮಕ್ಕಳ ಶಾಲೆಗೆ ದೇಣಿಗೆ, ಸಾಧಕರಾದ ಡಾ| ಕಾಂತಿ ಹರೀಶ್, ನವೀನ್ ಪಿ ಮಿಜಾರು, ಹರೀಶ್ ಶೆಟ್ಟಿ ಪಡ್ರೆ ಇವರುಗಳು ಗೌರವಿಸಿ ಸನ್ಮಾನಿಸಲಾಯಿತು ಜೊತೆಗೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪ್ರಥಮ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ವತ್ರೆ ಮಂಗಳೂರು ಇದರ ಆಶ್ರಯದಲ್ಲಿ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಮತ್ತು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಡಾ| ಪಿ ದಯಾನಂದ ಪೈ ಮತ್ತು ಪಿ ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್(ರಿ.) ಸೆಂಚುರಿ ಗ್ರೂಪ್ ಬೆಂಗಳೂರು ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು. ಇದರ ಸದುಪಯೋಗವನ್ನು ಊರ ಮತ್ತು ಪರವೂರ ನಾಗರಿಕರು ಪಡೆದುಕೊಂಡರು. ಒಂದೊಳ್ಳೆ ಸಾಮಾಜಿಕ ಚಿಂತನೆಯ ಕಾರ್ಯಕ್ರಮಕ್ಕೆ ಸಾಕ್ಷಿಯಾದರು ತುಡರ್ ಸೇವಾ ಟ್ರಸ್ಟ್(ರಿ.)

✒ ನೀತು ಪೂಜಾರಿ ಅಜಿಲಮೊಗರು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here