

ಬಂಟ್ವಾಳ, ಅ. ೨೧: ಸುಮಾರು 20 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಬಿ.ಸಿ.ರೋಡ್ ಸೌಂದರ್ಯೀಕರಣ ಯೋಜನೆಗೆ ಸೋಮವಾರ ಚಾಲನೆ ನೀಡಲಾಯಿತು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶಿಲಾನ್ಯಾಸ ಅವರು ಬಿ.ಸಿ.ರೋಡಿನ ಖಾಸಗಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಕಂದಾಯ ಸಚಿವ ಆರ್. ಅಶೋಕ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಸಂಜೀವ ಮಠಂದೂರು, ಮಾಜಿ ಸಚಿವ ನಾಗರಾಜ ಶೆಟ್ಟಿ, ಮಾಜಿ ಶಾಸಕರಾದ ರುಕ್ಮಯಪೂಜಾರಿ, ಪದ್ಮನಾಭ ಕೊಟ್ಟಾರಿ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೂಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ.ಸದಸ್ಯ ರಾದ ತುಂಗಪ್ಪ ಬಂಗೇರ, ಕಮಾಲಾಕ್ಷೀ ಕೆ.ಪೂಜಾರಿ, ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಎಸ್.ಪಿ.ಲಕ್ಮೀಪ್ರಸಾದ್, ಪುತ್ತೂರು ಡಿ.ವೈಎಸ್ ಪಿ ದಿನಕರ ಶೆಟ್ಟಿ, ಜಿ.ಪಂ.ಸಿ.ಒ. ಡಾ! ಆರ್ ಸೆಲ್ವಮಣಿ, ಎನ್.ಎಚ್.ಎ.ಐ.ನ ಪ್ರಾಜೆಕ್ಟ್ ಡೈರೆಕ್ಟರ್ ಶಿಶುಮೋಹನ್ , ತಹಶೀಲ್ದಾರ್ ರಶ್ಮಿ .ಎಸ್ .ಆರ್, ವಿನ್ಯಾಸ ಕಾರ ಧರ್ಮರಾಜ್, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಡಾ! ಪ್ರಶಾಂತ್ ಮಾರ್ಲ, ವಿವೇಕ್ ಶೆಟ್ಟಿ ನಗ್ರಿಗುತ್ತು, ಶ್ರೀಕಾಂತ್ ಶೆಟ್ಟಿ, ತಾ.ಪಂ.ಇ.ಒ.ರಾಜಣ್ಣ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಯಶವಂತ್ ಕುಮಾರ್, ಉದಯಕುಮಾರ್, ದೇವದಾಸ್ ಶೆಟ್ಟಿ, ಹಾಗೂ ಎನ್.ಎಂಪಿ.ಟಿ, ಎಂ. ಅರ್.ಪಿ.ಎಲ್, ಒ.ಎನ್.ಜಿ.ಸಿ.ಎಚ್.ಪಿ, ಭಾರತ್ ಪೆಟ್ರೋಲಿಯಂ, ಇಂಡಿಯನ್ ಒಯಿಲ್ ಕಂಪನಿಯ ಪ್ರಮುಖರು, ಉದ್ಯಮಿಗಳಾದ ಶಶಿಕಿರಣ್ ಶೆಟ್ಟಿ, ಸಂತೋಷ್ ಕುಮಾರ್, ಬಿ.ಎ,ಮೊಯ್ದೀನ್, ಜೆರಾಲ್ಡ್ ಡಿಮೆಲ್ಲೊ, ಜಗನ್ನಾಥ ರಾವ್ ಹಾಜರಿದ್ದರು.
ಪ್ರಮುಖರಾದ ಜಿ.ಆನಂದ, ಎ.ಗೋವಿಂದ ಪ್ರಭು, ಬಿ.ದೇವದಾಸ ಶೆಟ್ಟಿ, ಕೆ.ಹರಿಕೃಷ್ಣ ಬಂಟ್ವಾಳ್, ಸಂತೋಷ್ ಕುಮಾರ್ ಬೋಳಿಯಾರ್, ರಾಮದಾಸ ಬಂಟ್ವಾಳ, ಪ್ರಭಾಕರ ಪ್ರಭು, ಮೋನಪ್ಪ ದೇವಸ್ಯ, ನಾರಾಯಣ ಶೆಟ್ಟಿ, ವಿಜಯ ರೈ, ರಮಾನಾಥ ರಾಯಿ ಮತ್ತಿತರರು ಉಪಸ್ಥಿತರಿದ್ದರು,
20 ಕೋಟಿ ರೂ. ಯೋಜನೆ:
ಮಂಗಳೂರಿನ ವಿನ್ಯಾಸಕಾರ ಧರ್ಮರಾಜ್ ಅವರ ನೆರವಿನಿಂದ ಯೋಜನೆ ರೂಪುರೇಷೆ ತಯಾರಾಗಿದೆ. ಎಂ.ಆರ್.ಪಿ.ಎಲ್, ಎನ್.ಎಂ.ಪಿ.ಟಿ., ಒ.ಎನ್.ಜಿ.ಸಿ, ಎಚ್.ಪಿ.ಸಿ.ಎಲ್, ಬಿ.ಪಿ.ಸಿ.ಎಲ್, ಐ.ಒ.ಸಿ.ಎಲ್ ತನ್ನ ನಿಧಿಯನ್ನು ಅಭಿವೃದ್ಧಿಗೆ ನೀಡಲಿದೆ. ಇದರಲ್ಲಿ ಎನ್.ಎಂ.ಪಿ.ಟಿ. ವತಿಯಿಂದ ಅತ್ಯುತ್ಕೃಷ್ಟ ದರ್ಜೆಯ ಶೌಚಾಲಯ ನಿರ್ಮಾಣವಾಗಲಿದೆ. 2 ಕೋಟಿ ರೂ ಅಂದಾಜು ವೆಚ್ಚದ ಸಿಸಿ ಕ್ಯಾಮರಾ, ಸರ್ವೀಸ್ ರಸ್ತೆಯಲ್ಲಿ ಫುಟ್ ಪಾತ್, ವಾರದ ಸಂತೆ, ಕೈಕುಂಜೆ ರಸ್ತೆ ಅಗಲೀಕರಣ, ಬಸ್ ನಿಲ್ದಾಣ ಎದುರು ಸರ್ಕಲ್, ಬೀದಿದೀಪ, ಪಾರ್ಕಿಂಗ್ ಈ ಯೋಜನೆಯಲ್ಲಿ ಒಳಗೊಂಡಿದೆ.
10 ಕೋಟಿ ರೂ ಸಿ.ಎಸ್.ಆರ್ ಫಂಡ್ ನಿಂದ ದೊರಕಲಿದ್ದರೆ, ಮುಖ್ಯಮಂತ್ರಿಯವರು ಈಗಾಗಲೇ 5 ಕೋಟಿ ರೂಗಳನ್ನು ಘೋಷಿಸಿದ್ದಾರೆ. ಉಳಿದದ್ದನ್ನು ಶಾಸಕರ ನಿಧಿಯಿಂದ ಒದಗಿಸಲಾಗುತ್ತದೆ.








