ಬಂಟ್ವಾಳ: ಬಂಟ್ವಾಳ ಪುರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲದೆ ವರ್ಷವೇ ಕಳೆದಿದ್ದು ಒಂದೆಡೆಯಾದರೆ, ಇದೀಗ ಪುರಸಭೆಯ ಮುಖ್ಯಾಧಿಕಾರಿ ಹುದ್ದೆಯು ಖಾಲಿಯಾಗಿ  15 ದಿನಗಳೇ ಕಳೆದಿರುವುದರಿಂದ  ಪುರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತದ ಜತೆಗೆ ಅಧಿಕಾರಿಯೂ ಇಲ್ಲದಂತಾಗಿದೆ.

ಬಂಟ್ವಾಳ ಪುರಸಭೆಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ರೇಖಾ ಜೆ.ಶೆಟ್ಟಿ ಅವರು ಕಾರ್ಕಳಕ್ಕೆ ವರ್ಗಾವಣೆಗೊಂಡು, ಈಗಾಗಲೇ ಬಂಟ್ವಾಳ ಪುರಸಭೆಯಿಂದ ನಿರ್ಗಮಿಸಿದ್ದಾರೆ. ಅವರು ನಿರ್ಗಮಿಸುವ ಸಂದರ್ಭ ಪುರಸಭೆಯ ವ್ಯವಸ್ಥಾಪಕಿ ಲೀಲಾವತಿಯವರಿಗೆ ಚಾರ್ಜ್ ನೀಡಿದ್ದು, ಬೇರೆಡೆಯಿಂದ ಯಾರೂ ಕೂಡ ಪ್ರಭಾರ ನೆಲೆಯಲ್ಲಿಯೂ ಆಗಮಿಸಿಲ್ಲ. ಜನಪ್ರತಿನಿಧಿಗಳ
ಆಡಳಿತ ವ್ಯವಸ್ಥೆಗೆ ಅಧ್ಯಕ್ಷರು,ಉಪಾಧ್ಯಕ್ಷರು ಇಲ್ಲದಿದ್ದು, ಪ್ರಸ್ತುತ ಆಡಳಿತಾಧಿಕಾರಿಯಾಗಿ ಮಂಗಳೂರು ಸಹಾಯಕ ಕಮೀಷನರ್ ಕಾರ್ಯನಿರ್ವಹಿಸುತ್ತಾರೆಯಾದರೂ ಅವರು      ಅಗತ್ಯವಿದ್ದರೆ ಮಾತ್ರ ಇಲ್ಲಿ ಬಂದು ಹೋಗುತ್ತಾರೆಯೇ ವಿನಹ ಇಲ್ಲದಿದ್ದಲ್ಲಿ ಇತ್ತ ಸುಳಿಯುವುದೇ ಇಲ್ಲ.          ಸದ್ಯ ಮುಖ್ಯಾಧಿಕಾರಿಯ ಹುದ್ದೆಯ ಖಾಲಿ ಇರುವುದರಿಂದ ಅಗತ್ಯದ ಕೆಲಸಕ್ಕಾಗಿ ಬರುವಂತ ಪುರವಾಸಿಗಳು ಬರಿಗೈಯಲ್ಲಿ ವಾಪಾಸ್ ಹೋಗುವಂತದ್ದು ಒಂದೆಡೆಯಾದರೆ,ಇತ್ತ ಜನಪ್ರತಿನಿಧಿಗಳ ಆಡಳಿತವು ಆಸ್ತಿತ್ವಕ್ಕೆ ಬಾರದಿರುವುದರಿಂದ ಪುರಸಭಾ ವ್ಯಾಪ್ತಿಯಲ್ಲಿ ಅಭಿವೃದ್ದಿ ಕಾರ್ಯಗಳು ಕೂಡ ಕುಂಠಿತವಾಗಿದೆ ಎಂದು ಪುರವಾಸಿಗಳು ಆರೋಪಿಸಿದ್ದಾರೆ.    ಸದ್ಯ ಪುರಸಭೆಯಲ್ಲಿ ಅಧಿಕಾರಿಗಳದ್ದೆ ಕಾರುಬಾರಾಗಿದ್ದು,ಅವರು ನಡೆದದ್ದೆ ದಾರಿಯೆಂಬಂತಾಗಿದೆ.  ಬಂಟ್ವಾಳ ಪುರಸಭೆಯಲ್ಲಿ ಜನಪ್ರತಿನಿಧಿಗಳ ಆಡಳಿತ,ಪೂರ್ಣಾವಧಿಯ ಮುಖ್ಯಾಧಿಕಾರಿಯವರು ಏಕಕಾಲದಲ್ಲಿ ಖಾಲಿಯಾಗಿರುವಂತಹ ಸನ್ನಿವೇಶವೊಂದು ಇದೇ ಮೊದಲಬಾರಿಗೆ ಉದ್ಬವಿಸಿದೆ.  ಇಷ್ಟೊಂದು ಸುರ್ದಿಘ ಅವಧಿ ವರೆಗೆ  ಜನಪ್ರತಿನಿಧಿಗಳ ಆಡಳಿತವಿಲ್ಲರುವುದು ಹೊಸ ದಾಖಲೆಯಾಗಿದೆ.

ಅ.20ರ ಬಳಿಕ ಬರುತ್ತಾರಂತೆ
ಪುರಸಭೆಯ ಮೂಲಗಳ ಪ್ರಕಾರ ನೂತನ ಮುಖ್ಯಾಧಿಕಾರಿಯವರು ಅ.20ರ ಬಳಿಕ ಬರುಲಿದ್ದಾರೆಂದು  ಹೇಳಲಾಗುತ್ತಿದ್ದುರೂ ಅದಿನ್ನು ಖಚಿತವಿಲ್ಲ.
ಪ್ರಭಾರ ನೇಮಕದ ಜವಾಬ್ದಾರಿಯನ್ನು ಜಿಲ್ಲಾ ನಗರ ಯೋಜನಾ ನಿರ್ದೇಶಕರ ಕಚೇರಿ ನೇಮಿಸುತ್ತಿದೆ. ಆದರೆ ಪ್ರಸ್ತುತ ರೇಖಾ ಜೆ.ಶೆಟ್ಟಿ ಅವರೇ ಚಾರ್ಜ್ ನೀಡಿರುವ ಲೀಲಾವತಿಯವರು ಪ್ರಭಾರ ನೆಲೆಯಲ್ಲಿದ್ದಾರೆ.
ಬಂಟ್ವಾಳದಲ್ಲಿ ಈ ಹಿಂದೆ ಕೆಲ ಸಮಯಗಳ ಹಿಂದೆ  ಮುಖ್ಯಾಧಿಕಾರಿ  ಕಾರ್ಯನಿರ್ವಹಿಸಿದ್ದು, ಪ್ರಸ್ತುತ ಪುತ್ತೂರಿನಲ್ಲಿ ವ್ಯವಸ್ಥಾಪಕಿಯಾಗಿರುವ ಮಹಿಳಾ ಅಧಿಕಾರಿಯೊಬ್ಬರು ಬಂಟ್ವಾಳ ಪುರಸಭೆಗೆ ಮುಖ್ಯಾಧಿಕಾರಿಯಾಗಿ ಆಗಮಿಸುತ್ತಾರೆ ಎನ್ನಲಾಗುತ್ತಿದೆ. ಜತೆಗೆ ಇತರ ಅಕಾರಿಗಳ ಹೆಸರುಗಳು ಕೂಡ ಕೇಳಿಬರುತ್ತಿದೆ. ಆದರೆ ಒಂದೆರಡು ದಿನದೊಳಗಾಗಿ ಮುಖ್ಯಾಧಿಕಾರಿಯವರ ಹುದ್ದೆ ಭರ್ತಿಯಾಗಲಿದೆ ಎನ್ನುತ್ತವೆ ಪುರಸಭೆ ಮೂಲಗಳು
ರೇಖಾ ಶೆಟ್ಟಿ ಅವರು ಈ ಹಿಂದೆ ಚುನಾವಣೆಯ ಸಂದರ್ಭದಲ್ಲಿ ಕಾರ್ಕಳ ಪುರಸಭೆಯಲ್ಲಿ ಕಾರ್ಯನಿರ್ವಹಿಸಿದ್ದು, ಹೀಗಾಗಿ ಮತ್ತೆ ಅವರನ್ನು ಕಾರ್ಕಳ ಪುರಸಭೆಗೆ ಮುಖ್ಯಾಧಿಕಾರಿಯನ್ನಾಗಿ ನೇಮಿಸಲಾಗಿದೆ.

ತನಗೆ ಚಾರ್ಜ್ ನೀಡಿದ್ದಾರೆ:ಲೀಲಾವತಿ
ಪ್ರಸ್ತುತ ಹಿಂದಿನ ಮುಖ್ಯಾಧಿಕಾರಿಯವರು ತನಗೆ ಚಾರ್ಜ್ ನೀಡಿ ಹೋಗಿದ್ದಾರೆ. ಹೊಸ ಮುಖ್ಯಾಧಿಕಾರಿಯವರು ಆಗಮಿಸುವ ಕುರಿತು ನಮಗೆ ಮಾಹಿತಿಯಿಲ್ಲ.
-ಲೀಲಾವತಿ
ವ್ಯವಸ್ಥಾಪಕಿ, ಬಂಟ್ವಾಳ ಪುರಸಭೆ.

ಒಂದೆರಡು ದಿನದಲ್ಲಿ ಪುರಸಭೆಗೆ ನೂತನ ಮುಖ್ಯಾಧಿಕಾರಿಯವರು ಅಗಮಿಸಲಿದ್ದಾರೆ. ಸೋಮವಾರ ಕಾರ್ಯಕ್ರಮದ ನಿಮಿತ್ತ ಬಂಟ್ವಾಳಕ್ಕೆ ಪೌರಾಡಳಿತ ಸಚಿವರು ಬರಲಿದ್ದಾರೆ.

-ರಾಜೇಶ್ ನಾಯ್ಕ್ ಶಾಸಕರು ಬಂಟ್ವಾಳ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here