ವಿಟ್ಲ: ಕಳೆದ ಹದಿನೆಂಟು ವರ್ಷಗಳಿಂದ ನಾನಾ ಕಡೆಗಳಲ್ಲಿ ನೃತ್ಯ ತರಗತಿಗಳನ್ನು ನಡೆಸುತ್ತಾ ಗುರುತಿಸಲ್ಪಟ್ಟಿರುವ ಪುತ್ತೂರು ವೈಷ್ಣವಿ ನಾಟ್ಯಾಲಯದ ವಿಟ್ಲ ಶಾಖೆ ಇತ್ತೀಚೆಗೆ ವಿಟ್ಲ ಶ್ರೀ ಭಗವತಿ ದೇವಸ್ಥಾನದ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು. ಹಿರಿಯ ನಾಟ್ಯ ವಿದುಷಿ ಪುತ್ತೂರು ವಿಶ್ವಕಲಾನಿಕೇತನದ ನೃತ್ಯಗುರು ನಯನ ವಿ.ರೈ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶ್ರೀಭಗವತಿ ದೇವಸ್ಥಾನದ ವ್ಯವಸ್ಥಾಪಕ ಕೇಶವ ಅವರು ಉಪಸ್ಥಿತರಿದ್ದರು. ಸಿಂಚನ ಬಾಯಾರು, ಪ್ರಣೀತ ಬಾಯಾರು ಪ್ರಾರ್ಥಿಸಿದರು. ಜಯಪ್ರಕಾಶ್ ಪುತ್ತೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಾಟ್ಯಾಲಯದ ನಿರ್ದೇಶಕಿ ವಿದುಷಿ ಯೋಗೇಶ್ವರಿ ಪುತ್ತೂರು ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here