

ಬಂಟ್ವಾಳ: ಭಾರತೀಯ ಸ್ಟೇಟ್ ಬ್ಯಾಂಕ್ ಬಿ.ಸಿ.ರೋಡಿನ ಶಾಖೆಯ ವತಿಯಿಂದ ಬಿ.ಸಿ.ರೋಡಿನ ತಾಲೂಕು ಪಂಚಾಯತ್ ಕಚೇರಿಯ ಸಾಮರ್ಥ್ಯ ಸೌಧದಲ್ಲಿ ಲೋನ್ ಹಬ್ಬ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ದೀಪ ಬೆಳಗಿಸಿ ಉದ್ಘಾಟಿಸಿ ದರು.
ರಾಷ್ಟ್ರೀಯ ಬ್ಯಾಂಕ್ ಗಳು ಗ್ರಾಹಕರಿಗೆ ಹತ್ತಿರವಾಗಬೇಕು. ಕ್ಲಪ್ತ ಸಮಯದಲ್ಲಿ ಗ್ರಾಹಕರಿಗೆ ಪ್ರಯೋಜನ ವಾಗುವ ರೀತಿಯಲ್ಲಿ ಲೋನ್ ನೀಡುವ ಕೆಲಸಗಳು ಬ್ಯಾಂಕ್ ಮೂಲಕ ಅಗಬೇಕಾಗಿದೆ.
ಬ್ಯಾಂಕ್ ನೀಡುವ ಸೇವೆ ಉತ್ತಮವಾಗಿ ದ್ದರೆ ಗ್ರಾಹಕರು ಹೆಚ್ಚು ಹೆಚ್ಚಾಗಿ ಪ್ರಯೋಜನ ಪಡೆಯುತ್ತಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ, ಪಿಲಾತಬೆಟ್ಟು ಸಹಕಾರಿ ಬ್ಯಾಂಕ್ ಅಧ್ಯಕ್ಷ ಲಕ್ಮೀನಾರಾಯಣ ಉಡುಪ, ವಿಜಯ ರೆಸಿಡೆನ್ಸಿ ಮಡಂತ್ಯಾರು ಇದರ ಮಾಲಕ ವಿಜಯ ರೈ, ಅಪೂರ್ವ ಡೆವಲಪರ್ ನ ಮಾಲಕ ರಾಮ್ ದಾಸ್ ಬಂಟ್ವಾಳ, ಎಸ್.ಬಿ.ಐ.ಚೀಪ್ ಮ್ಯಾನೇಜರ್ ರವೀಂದ್ರ ಕುಮಾರ್ ಟಿ.ವಿ. ಮ್ಯಾನೇಜರ್ ಜೆಮ್ಸ್ ಲೂಯಿಸ್, ಸಿಬ್ಬಂದಿ ಗಳಾದ ಶ್ರೀಕಾಂತ್, ಜ್ಯೋತಿ, ರೇಶ್ಮಾ ಉಪಸ್ಥಿತರಿದ್ದರು.







