ಬಂಟ್ವಾಳ: ನಾವೂರು ಗ್ರಾಮ ಪಂಚಾಯತ್ ಮಟ್ಟದ ಸಿರಿ ಸಂಜಿವಿನಿ ಸ್ವಸಹಾಯ ಸಂಘದ ಒಕ್ಕೂಟ ಸಭೆ ಅ. 18 ರಂದು ಶುಕ್ರವಾರ ನಾವೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ 12 ಫಲಾನುಭವಿಗಳಿಗೆ 6 ಸ್ವ ಸಹಾಯ ಸಂಘಗಳ ಮೂಲಕ ಸಂಜಿವಿನಿ ರಾಷ್ಟ್ರೀಯ ಗ್ರಾಮೀಣ ಜೀವನೊತ್ಪನ್ನ ಯೋಜನೆಯ (NRLM) ಅಂಗವಾಗಿ ಸಾಲ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ನಾವೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗುಲಾಬಿ, ತಾಲೂಕು ಪಂಚಾಯತ್ ನ ಸಹಾಯಕ ನಿರ್ದೆಶಕರಾದ ಪ್ರಶಾಂತ್, ಪಂಚಾಯತ್ ಸದಸ್ಯರಾದ ಸದನಂದ ಗೌಡ, ಜಯಂತಿ ಹಾಗೂ ಪಂ. ಅ.ಅಧಿಕಾರಿಯವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬ್ಯಾಂಕಿಂಗ್ ಸೌಲಭ್ಯದ ಬಗ್ಗೆ ಜ್ಞಾನ ಜ್ಯೊತಿ ಸಂಸ್ಥೆಯ ಜಯಂತ್ ಶೆಟ್ಟಿಯವರು ಮಾಹಿತಿ ಕಾರ್ಯಗಾರ ನಡೆಸಿಕೊಟ್ಟರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here