

ಮಂಗಳೂರು: ಆಸ್ತಿಯ ವಿಚಾರಕ್ಕೆ ಅಣ್ಣತಮ್ಮಂದಿರ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರು ತಾಲೂಕಿನ ಬೆಂಗ್ರೆಯ ಕಸಬಾ ಬೆಂಗ್ರೆ ಕಿಲಾರಿ ಮಸೀದಿ ಸಮೀಪ ಈ ಘಟನೆ ನಡೆದಿದೆ.
ಬೆಂಗ್ರೆ ನಿವಾಸಿ ಮುಸ್ತಾಪ ಕೊಲೆಯಾದ ವ್ಯಕ್ತಿ. ಮುಸ್ತಫಾನ ಸಹೋದರ ರೈಜು ಯಾನೆ ಅಬ್ದುಲ್ ರಹಮಾನ್ ಕೊಲೆ ಆರೋಪಿ.
ಆಸ್ತಿಯ ಮತ್ತು ಮನೆ ವಿಚಾರಕ್ಕೆ ಇವರ ಮನೆಯಲ್ಲಿ ಯಾವಾಗಲೂ ಗಲಾಟೆ ನಡೆಯುತ್ತಿತ್ತು. ಅಲ್ಲದೆ ತಾಯಿ ಹಾಗೂ ತಂಗಿಗೆ ಮನೆಯ ವಿಚಾರದಲ್ಲಿ ರೈಜು ಹಿಂಸೆ ನೀಡುತ್ತಿದ್ದ ಎಂದು ಹೇಳಲಾಗಿದೆ.
ನಿನ್ನೆ ರಾತ್ರಿ ಸುಮಾರು ಹತ್ತು ಗಂಟೆಯ ವೇಳೆಗೆ ಮತ್ತೆ ಮನೆಯ ವಿಚಾರಕ್ಕೆ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ ತಾಯಿ ಹಾಗೂ ಇವರ ಬಾವ ಗಲಾಟೆ ಬಿಡಿಸಲು ಪ್ರಯತ್ನಿಸಿದ್ದಾರೆ. ಆದರೆ ಆರೋಪಿ ರೈಜು ತನ್ನ ಜೊತೆ ಇದ್ದ ಚೂರಿಯಿಂದ ಮುಸ್ತಾಪ ನಿಗೆ ಇರಿದು ಪರಾರಿಯಾಗಿದ್ದ ನೆ.
ಗಂಭೀರ ವಾಗಿ ಗಾಯಗೊಂಡ ಮುಸ್ತಾಫನನ್ನು ಕೂಡಲೇ ಮಂಗಳೂರು ಖಾಸಗಿ ಆಸ್ಪತ್ರೆ ಗೆ ದಾಖಲು ಮಾಡಲಾಗಿದೆ ಯಾದರೂ ಮುಂಜಾನೆ ಸುಮಾರು 2.30 ರ ವೇಳೆ ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಅಣ್ಣ ತಮ್ಮಂದಿರ ಅಸ್ತಿಯ ವಿಚಾರದ ಗಲಾಟೆ ಕೊನೆಗೂ ಕೊಲೆಯಲ್ಲಿ ಅಂತ್ಯವಾಗಿದೆ. ಸ್ಥಳ ಕ್ಕೆ ಪಣಂಬೂರು ಠಾಣಾ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.







