Saturday, April 6, 2024

ಬಿಎಸ್‌ಕೆಬಿಎ ಆಶ್ರಯ ವಾರ್ಷಿಕೋತ್ಸವ-ಜ್ಯೇಷ್ಠ ನಾಗರಿಕರ ದಿನಾಚರಣೆ : ‘ಆಶ್ರಯ ಸ್ಟಾರ್ ಅವಾರ್ಡ್’ ಪ್ರದಾನ-ನೃತ್ಯ-ದಾಂಡಿಯಾ ಕಾರ್ಯಕ್ರಮ

(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ: ಬಿಎಸ್‌ಕೆಬಿ ಎಸೋಸಿಯೇಶನ್ (ಗೋಕುಲ) ಸಾಯನ್ ತನ್ನ ಅಮೃತ ಮಹೋತ್ಸವದ ಸವಿನೆನಪಿಗಾಗಿ ನೇರೂಲ್ ಸೀವುಡ್ಸ್‌ನಲ್ಲಿ ಸ್ಥಾಪಿಸಿದ ಹಿರಿಯ ನಾಗರಿಕರ ಆಶ್ರಯಧಾಮ ‘ಆಶ್ರಯ’ದ ವಾರ್ಷಿಕೋತ್ಸವ ಸಮಾರಂಭ ಹಾಗೂ ಜ್ಯೇಷ್ಠ ನಾಗರಿಕರ ದಿನಾಚರಣೆಯನ್ನು ಕಳೆದ ರವಿವಾರ (ಅ.13) ಆಶ್ರಯದಲ್ಲಿ ಜರಗಿಸಿತು.

ಬಿಎಸ್‌ಕೆಬಿಎ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಅಧ್ಯಕ್ಷತೆಯಲ್ಲಿ ಜರುಗಿಸಲ್ಪಟ್ಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾಲ್ಟನ್ ಕ್ಯಾಪಿಟಲ್ ಆಡ್ವೈಸರ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಯು.ಆರ್ ಭಟ್, ವೀ ಕ್ಲಬ್ ಸಂಸ್ಥಾಪಕರಾದ ಕವಲ್ ರೇಖಿ ಮತ್ತು ಸರೋಜಾ ರೇಖಿ ಹಾಗೂ ಆಶ್ರಯದ ಹಿರಿಯ ನಾಗರಿಕರು ಉಪಸ್ಥಿತರಿದ್ದು ಜ್ಯೋತಿ ಪ್ರಜ್ವಲನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದೇ ಶುಭಾವಸರದಲ್ಲಿ ಜಗದೀಶ್ ಆಚಾರ್ಯ ತಮ್ಮ ಮಾತೃಶ್ರೀ ದಿ| ರತ್ನಾ ಆಚಾರ್ಯ ಅವರ ಸ್ಮಾರಣಾರ್ಥ ಸ್ಥಾಪಿಸಿದ ‘ಆಶ್ರಯ ಸ್ಟಾರ್ ಅವಾರ್ಡ್’ ಬಗ್ಗೆ ತಿಳಿಸಿದ ಬಳಿಕ 2019ನೇ ಸಾಲಿನ (ಪ್ರಸಕ್ತ ವರ್ಷದ) ಪುರಸ್ಕಾರನ್ನು ಅನ್ನಪೂರ್ಣ ರಾವ್ ಮತ್ತು ನಾಗರಾಜ್ ಅವರಿಗೆ ಪ್ರದಾನಿಸಿದರು.

 

ಯು.ಆರ್ ಭಟ್ ಮಾತನಾಡ್ತಿ ಬಾಳ ಸಂಜೆಯಲ್ಲಿರುವ ಹಿರಿಯರು ಗೌರವಯುತರಾಗಿ, ನೆಮ್ಮದಿಯಾಗಿ ಬಾಳುವಂತೆ ಅನುಕೂಲ ಕಲ್ಪಿಸಿಕೊಟ್ಟು ತನ್ನ ಸಾಮಾಜಿಕ ಪ್ರಜ್ಞೆಯನ್ನು ಮೆರೆದ ಬಿಎಸ್‌ಕೆಬಿ ಸಂಸ್ಥೆಯ ಪದಾಧಿಕಾರಿಗಳ ಪ್ರಯತ್ನ ಅತ್ಯಂತ ಸ್ತುತ್ಯರ್ಹ ಅನ್ನುತ್ತಾ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಿದ ಹಿರಿಯ ನಾಗರಿಕರನ್ನು ಅಭಿನಂದಿಸಿದರು.

ಆಶ್ರಯದಲ್ಲಿ ಈಗಾಗಲೇ ಹಿರಿಯರಿಗೆ ಬೇಕಾದ ಮೂಲಭೂತ ಅಗತ್ಯತೆಗಳನ್ನು ನಾವು ಒದಗಿಸಿದ್ದರೂ, ಈಗಿರುವ ಕಟ್ಟಡದಲ್ಲಿ ಇನ್ನೂ ಎರಡು ಮಹಡಿ ವಿಸ್ತರಿಸಿ ಫಿಸಿಯೋ ಥೆರಪಿ ಮುಂತಾದ ವೈದ್ಯಕೀಯ ಸೌಲಭ್ಯಗಳನ್ನು ಇಲ್ಲೇ ಒದಗಿಸುವ ಪ್ರಯತ್ನ ಮಾಡುತ್ತಿದ್ದೇವೆ. ಗೋಕುಲ ಪುನ:ರ್ ನಿರ್ಮಾಣದ ಕಾರ್ಯ ಪೂರ್ಣಗೊಂಡ ನಂತರ ಈ ಕೆಲಸ ಕೈಗೆತ್ತಿಕೊಳ್ಳುತ್ತಿದ್ದೇವೆ. ಇದಕ್ಕಾಗಿ ಸರ್ವರ ತುಂಬು ಸಹಕಾರದ ಅಗತ್ಯವಿದೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಡಾ| ಸುರೇಶ್ ರಾವ್ ಕೋರಿದರು.

ವೀಕ್ಲಬ್ ಆಫ್ ವಸಂತ್ ವಿಹಾರ್‌ನ ಡಾ| ಅರುಣ್ ರಾವ್, ಅಶೋಕ್ ಮೇಲ್ಮನೆ, ಸವಿತಾ ನಾಯಕ್ ಪ್ರಾಯೋಜಕತ್ವದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಶೈಲಿನಿ ರಾವ್, ಕೋಶಾಧಿಕಾರಿ ಹರಿದಾಸ್ ಭಟ್, ಆಶ್ರಯ ಸಂಚಾಲಕಿ ಚಂದ್ರಾವತಿ ರಾವ್ ಉಪಸ್ಥಿತರಿದ್ದು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಎಲಿಜಬೆತ್ ಪರೇರಾ ಪಂಡಿತ್, ಫರಾಶಾ ಕವರಾನ ಮತ್ತು ಹರ್ಷಿತಾ ಗೋವಿಂದಾನಿಯವರ ನೃತ್ಯ ಸಂಯೋಜನೆಯಲ್ಲಿ ಆಶ್ರಯದ ಹಿರಿಯ ನಾಗರಿಕರು, ಭಾರತೀಯ ಹಾಗೂ ಪಾಶ್ಚಿಮಾತ್ಯ ಶೈಲಿ ಸಮ್ಮಿಶ್ರ ನೃತ್ಯ ಕಾರ್ಯಕ್ರಮ ಖಯಾಲಿ ಪುಲಾವ್ ಮತ್ತು ದೇಸಿ ತಡ್ಕಾ ಸಾದರ ಪಡಿಸಿದರು. ೬೦ ರಿಂದ ೯೫ ವರ್ಷದ ಹಿರಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಲಯಬದ್ಧವಾಗಿ ಹೆಜ್ಜೆ ಹಾಕಿ ನರ್ತಿಸಿ ಪ್ರೇಕ್ಷಕರ ಮನರಂಜಿಸಿದ ರು. ಯುವ ವಿಭಾಗವು ಜರಗಿದ ವಾರ್ಷಿಕ ದಾಂಡಿಯಾ ಕಾರ್ಯಕ್ರಮ ಆಯೋಜಿಸಿದ್ದು, ನೂರಾರು ಹಿರಿ ಕಿರಿಯ ಸದಸ್ಯರು ಪಾಲ್ಗೊಂಡರು. ಜತೆ ಕಾರ್ಯದರ್ಶಿ ಚಿತ್ರಾ ಮೇಲ್ಮನೆ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.

ಆಶ್ರಯ ನಿವಾಸಿ ಧರ್ಮಾ೦ಬಾಳ್ ಪ್ರಾರ್ಥನೆ ಹಾಡಿದರು. ಉಪಾಧ್ಯಕ್ಷರಾದ ವಾಮನ್ ಹೊಳ್ಳ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಚಿತ್ರಾ ಮೇಲ್ಮನೆ ಅತಿಥಿಗಳನ್ನು ಪರಿಚಯಿಸಿದರು. ಡಾ| ಸುರೇಶ್ ರಾವ್ ಅತಿಥಿಗಳಿಗೆ ಶಾಲು ಹೊದಿಸಿ, ಸ್ಮರಣಿಕೆ, ಹೂಗುಚ್ಛವನ್ನಿತ್ತು ಗೌರವಿಸಿದರು ಹಾಗೂ ಪದಾಧಿಕಾರಿಗಳು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ನೃತ್ಯ ಸಂಯೋಜಕರು, ಪ್ರಾಯೋಜಕರನ್ನು ಹಾಗೂ ಆಶ್ರಯ ಸ್ವಯಂ ಸೇವಕರನ್ನು ಅಭಿವಂದಿಸಿದರು. ಗೌರವ ಕಾರ್ಯದರ್ಶಿ ಎ.ಪಿ.ಕೆ ಪೋತಿ ಆಶ್ರಯದ ಸೌಕರ್ಯ, ಸವಲತ್ತು, ಮತ್ತು ಅಲ್ಲಿಯ ಚಟುವಟಿಕೆಗಳನ್ನು ಸಾಕ್ಷ ಚಿತ್ರಪ್ರದರ್ಶನದ ಮೂಲಕ ಪ್ರಸ್ತುತಪಡಿಸಿದರು. ಚಂದ್ರಾವತಿ ರಾವ್ ಧನ್ಯವಾದ ಸಮರ್ಪಣೆ ಗೈದರು.

More from the blog

ಬಂಟ್ವಾಳ: ನಿಯಮ ಮೀರಿ ಚಾಲನೆ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ಗ್ಯಾರಂಟಿ….

ಬಂಟ್ವಾಳ: ರಸ್ತೆಯಲ್ಲಿ ಟ್ರಾಫಿಕ್ ಪೋಲೀಸರು ದಂಡ ವಸೂಲಿ ಮಾಡುವ ವೇಳೆ ಸುಳ್ಳು ಹೇಳಿಬಚಾವಾಗಲು ಸಾಧ್ಯವಿಲ್ಲ, ಜೊತೆಗೆ ಅಸಭ್ಯ ವರ್ತನೆ ಮಾಡಿದರೆ ಜೋಕೆ, ಅವರ ಶರೀರದಲ್ಲಿ ಕಣ್ಗಾವಲು ಕ್ಯಾಮರಾ ಅಳವಡಿಸಿಲಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನು ಸೆರೆ...

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ : ಚೆಂಡಿನ ಗದ್ದೆಯಲ್ಲಿ ಪ್ರಥಮ ಚೆಂಡು

ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ದೇವಳದ ಚೆಂಡಿನ ಗದ್ದೆಯಲ್ಲಿ ಇಂದು ಪ್ರಥಮ ಚೆಂಡು ನಡೆಯಿತು. ‌ ಇವತ್ತಿನಿಂದ ಮುಂದಿನ ಐದು ದಿನಗಳ ಕಾಲ ಇಲ್ಲಿ ಚೆಂಡು...

ಏಪ್ರಿಲ್ 7ರಂದು ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ

ಬಂಟ್ವಾಳ: ಏಪ್ರಿಲ್ 7ರಂದು ಅಪರಾಹ್ನ 3 ಗಂಟೆಗೆ ಬಿ.ಸಿ.ರೋಡು ರಂಗೋಲಿ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ತಾಲೂಕು ಘಟಕದ...

ದ್ವಿಚಕ್ರ ವಾಹನಕ್ಕೆ ರಿಕ್ಷಾ ಡಿಕ್ಕಿ : ಸಹಸವಾರ ಸ್ಥಳದಲ್ಲೇ ಮೃತ್ಯು

ಬಂಟ್ವಾಳ: ರಿಕ್ಷಾ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುತ್ತಿದ್ದ ಸಹಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನರಿಕೊಂಬು ಎಂಬಲ್ಲಿ ನಡೆದಿದೆ. ನರಿಕೊಂಬು ನಿವಾಸಿ ನೀಲಪ್ಪ ಪೂಜಾರಿ ಅವರ ಮಗ ಪವನ್ ( 17) ಮೃತಪಟ್ಟ ಬಾಲಕ. ಮನೆಯಿಂದ...