Vector logo for Wine Shop, cut paper sign with set of cartoon french wine bottles and half full shiny wineglasses, decorative flourishes and lettering for words wine shop, red bunch of grapes fruit.

ಬಂಟ್ವಾಳ: ಬಿಸಿರೋಡಿನ ವೈನ್ ಶಾಪ್ ಒಂದರಲ್ಲಿ ಬಿಯರ್ ಕಾಳಗ ನಿನ್ನೆ ರಾತ್ರಿವೇಳೆ ನಡೆದಿದ್ದು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಸಿರೋಡಿನ ಸರ್ವೀಸ್ ರಸ್ತೆಯಲ್ಲಿರುವ ವೈನ್ ಶಾಪ್ ಒಂದರಲ್ಲಿ ಬಿಸಿರೋಡಿನ ತಂಡ ಮತ್ತು ಮಂಗಳೂರು ತಂಡದ ನಡುವೆ ಕುಡಿದ ಮತ್ತಿನಲ್ಲಿ ಮಾತಿಗೆ ಮಾತಿ ಬೆಳೆದು ಬಿಯರ್ ಬಾಟಲಿಯಲ್ಲಿ ಹೊಡೆದಾಡಿ ಬಳಿಕ ಆಸ್ಪತ್ರೆ ಗೆ ದಾಖಲಾದ ಘಟನೆ ನಡೆದಿದೆ.
ವೈನ್ ಶಾಪ್ ನಲ್ಲಿ ಬಿಸಿರೋಡಿನ ತಂಡ ಹಾಗೂ ಮಂಗಳೂರು ತಂಡದವರು ಕುಡಿಯುತ್ತಿದ್ದ ವೇಳೆ ಊರಿನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿಕೊಂಡಿದ್ದು ಬಳಿಕ ಅದು ಹೊಡೆದಾಟಕ್ಕೆ ತಿರುಗಿದೆ.
ಬಿಯರ್ ಕುಡಿಯಿತ್ತಿದ್ದ ಇವರು ಬಿಯರ್ ಬಾಟಲಿಯಲ್ಲಿ ಹೊಡೆದಾಟ ನಡೆಸಿಕೊಂಡಿದ್ದಾರೆ.
ಬಳಿಕ ಗಾಯಗೊಂಡ ಮಂಗಳೂರು ತಂಡದವರು ಆಸ್ಪತ್ರೆ ಗೆ ದಾಖಲಾಗಿದ್ದರು.‌
ಬಿಸಿರೋಡಿನ ಶಶಿ ಮತ್ತು ಅವನ 15 ಮಂದಿ ಸೇರಿ ಮಂಗಳೂರು ನಿವಾಸಿಗಳಾದ ವಿದಾತ್ ಶೆಟ್ಟಿ, ಚರಣ್, ವಿಶಾಲ್ ರಾಜ್ ಮತ್ತು ವಿಠಲ ಕರ್ಕೇರ ಅವರಿಗೆ ಬಿಯರ್ ಬಾಟಲಿಯಲ್ಲಿ ಹೊಡೆದಿದ್ದಾರೆ ಎಂದು ವಿದಾತ್ ಶೆಟ್ಟಿ ಬಂಟ್ವಾಳ ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ‌

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here