ಮಂಗಳೂರು: ಅಸ್ತಿಗಾಗಿ ಸಹೋದರನ ಕೊಲೆ ಮಾಡಿದ ಆರೋಪಿಯನ್ನು 24 ಗಂಟೆಯ ಒಳಗೆ ಬಂಧಿಸಿದ ಪಣಂಬೂರು ಪೋಲೀಸರು.
ರೈಜು ಯಾನೆ ಅಬ್ದುಲ್ ರಹಮಾನ್ ಬಂಧಿತ ಆರೋಪಿ.
ಎಸಿಪಿ ಶ್ರೀನಿವಾಸ ಗೌಡ ಅವರ ನೇತ್ರತ್ವದ ತಂಡ ಹಾಗೂ ಪಣಂಬೂರು ಠಾಣಾ ಪೋಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿ ದ್ದಾರೆ.
ಘಟನೆಯ ವಿವರ:
ಆಸ್ತಿಯ ವಿಚಾರಕ್ಕೆ ಅಣ್ಣತಮ್ಮಂದಿರ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಮಂಗಳೂರಿನಲ್ಲಿ ನಡೆದಿತ್ತು.
ಮಂಗಳೂರು ತಾಲೂಕಿನ ಬೆಂಗ್ರೆಯ ಕಸಬಾ ಬೆಂಗ್ರೆ ಕಿಲಾರಿ ಮಸೀದಿ ಸಮೀಪ ಈ ಘಟನೆ ನಡೆದಿತ್ತು.
ಬೆಂಗ್ರೆ ನಿವಾಸಿ ಮುಸ್ತಾಪ ಕೊಲೆಯಾದ ವ್ಯಕ್ತಿ.
ಮುಸ್ತಫಾನ ಸಹೋದರ ರೈಜು ಯಾನೆ ಅಬ್ದುಲ್ ರಹಮಾನ್ ಕೊಲೆ ಆರೋಪಿ.
ಅಸ್ತಿಯ ಮತ್ತು ಮನೆ ವಿಚಾರಕ್ಕೆ ಇವರ ಮನೆಯಲ್ಲಿ ಯಾವಾಗಲೂ ಗಲಾಟೆ ನಡೆಯುತ್ತಿತ್ತು .
ಅಲ್ಲದೆ ತಾಯಿ ಹಾಗೂ ತಂಗಿಗೆ ಮನೆಯ ವಿಚಾರದಲ್ಲಿ ರೈಜು ಹಿಂಸೆ ನೀಡುತ್ತಿದ್ದ ಎಂದು ಹೇಳಲಾಗಿದೆ.
ನಿನ್ನೆ ರಾತ್ರಿ ಸುಮಾರು ಹತ್ತು ಗಂಟೆಯ ವೇಳೆಗೆ ಮತ್ತೆ ಮನೆಯ ವಿಚಾರಕ್ಕೆ ಗಲಾಟೆ ನಡೆದಿದೆ.
ಈ ಸಂದರ್ಭದಲ್ಲಿ ತಾಯಿ ಹಾಗೂ ಇವರ ಬಾವ ಗಲಾಟೆ ಬಿಡಿಸಲು ಪ್ರಯತ್ನಿಸಿದ್ದಾರೆ.
ಅದರೆ ಆರೋಪಿ ರೈಜು ತನ್ನ ಜೊತೆ ಇದ್ದ ಚೂರಿಯಿಂದ ಮುಸ್ತಾಪ ನಿಗೆ ಹಿರಿದು ಪರಾರಿಯಾಗಿದ್ದ.
ಗಂಭೀರ ವಾಗಿ ಗಾಯಗೊಂಡ ಮುಸ್ತಾಫನನ್ನು ಕೂಡಲೇ ಮಂಗಳೂರು ಖಾಸಗಿ ಆಸ್ಪತ್ರೆ ಗೆ ದಾಖಲು ಮಾಡಲಾಗಿತ್ತು.ಅದರೆ ಮುಂಜಾನೆ ಸುಮಾರು 2.30 ರ ವೇಳೆ ಅತ ಮೃತಪಟ್ಟಿದ್ದಾನೆ.
ಅಣ್ಣ ತಮ್ಮಂದಿರ ಅಸ್ತಿಯ ವಿಚಾರದ ಗಲಾಟೆ ಕೊನೆಗೂ ಕೊಲೆಯ ಲ್ಲಿ ಅಂತ್ಯವಾಗಿದೆ.
ಸ್ಥಳ ಕ್ಕೆ ಪಣಂಬೂರು ಠಾಣಾ ಪೋಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here