

ವಿಟ್ಲ: ವಿಟ್ಲ ಸಮೀಪದ ಕೊಲಂಬೆ ಮದರಸ ಹಾಲ್ನಲ್ಲಿ ವಿಟ್ಲ ಡಿವಿಷನ್ ಎಸ್ಸೆಸ್ಸೆಫ್ ಸಮಿತಿ ವತಿಯಿಂದ ಹಳೆ ಬೇರು ಹೊಸ ಚಿಗುರು ಎಂಬ ವಿಶೇಷ ಕಾರ್ಯಕ್ರಮ ನಡೆಯಿತು. ಅಧ್ಯಕ್ಷರಾದ ಅಬ್ದುರ್ರಹ್ಮಾನ್ ಶರಫಿ ಮೂಡಂಬೈಲ್ ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ವಹಿಸಿದ್ದರು.
ಸ್ಥಳೀಯ ಖತೀಬರಾದ ಬಹು! ಖಾಸಿಂ ಸಖಾಫಿ ಅಳಕೆಮಜಲು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಎಸ್ಎಂಎ ರಾಜ್ಯ ಕಾರ್ಯದರ್ಶಿ ಅಶ್ರಫ್ ಸಖಾಫಿ ಮಾಡಾವು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಆಯೋಜಿಸಿದ ಉದ್ದೇಶದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಇಬ್ರಾಹೀಂ ಮುಸ್ಲಿಯಾರ್ ಕೊಡಂಗಾಯಿ, ಕೆ.ಎಂ ಅಬ್ದುಲ್ ಹಮೀದ್ ಸಖಾಫಿ ಕೊಡಂಗಾಯಿ, ಎಂಕೆಎಂ ಹನೀಫ್ ಕಾಮಿಲ್ ಸಖಾಫಿ, ಇಸ್ಮಾಯಿಲ್ ಮಾಸ್ಟರ್ ಮಂಗಳಪದವು, ಮುಸ್ತಫಾ ಕೋಡಪದವು, ಯೂನುಸ್ ಇಮ್ದಾದಿ, ಝಿಯಾದ್ ಮಾಸ್ಟರ್ ಬೈರಿಕಟ್ಟೆ, ಇಸ್ಮಾಯಿಲ್ ಮದನಿ ಕೋಡಪದವು, ಹಾಗೂ ಹಲವು ಗಣ್ಯರು ಸಂಘಟನೆಯಲ್ಲಿ ದುಡಿದ ಹಾಗೂ ಅವರವರ ನಾಯಕತ್ವದಲ್ಲಿ ಸಂಘಟನೆಯನ್ನು ಕಟ್ಟಿಬೆಳೆಸಿದ ಬಗ್ಗೆ ಅನುಭವವನ್ನು ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಯಶಸ್ವಿಗಾಗಿ ಸಹಕರಿಸಿದ ಕೊಲಂಬೆ ಜಮಾಅತ್ ಹಾಗೂ ಕೊಲಂಬೆ ಎಸ್ಸೆಸ್ಸೆಫ್ ಶಾಖಾ ನಾಯಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಎಸ್ ವೈಎಸ್,ಎಸ್ಸೆಸ್ಸೆಫ್ ಹಾಗೂ ಸಂಘ ಕುಟುಂಬದ ನಾನಾ ಘಟಕದ ನಾಯಕರು ಪಾಲ್ಗೊಂಡಿದ್ದರು. ಸ್ವಾಗತ ಸಮಿತಿ ಚೆಯರ್ಮೇನ್, ಮೂಸಕೆಲೀಂ ಬೈರಿಕಟ್ಟೆ ಸ್ವಾಗತಿಸಿದರು. ಸ್ವಾಗತ ಸಮಿತಿ ಕನ್ವೀನರ್ ಅಬ್ದುರಝ್ಝಾಕ್ ಪೆಲತ್ತಡ್ಕ ವಂದಿಸಿದರು. ಕೆ.ಎಂ ಅಶ್ರಫ್ ಸಖಾಫಿ ಕನ್ಯಾನ ಕಾರ್ಯಕ್ರಮ ನಿರೂಪಿಸಿದರು.








