


ವಿಟ್ಲ: ವಿಟ್ಲ ಮೂಡ್ನೂರು ಗ್ರಾಮದ ಪೈಸಾರಿ ಎಂಬಲ್ಲಿ ಚಲಿಸುತ್ತಿದ್ದ ಟ್ಯಾಕ್ಟರ್ನಿಂದ ಬಿದ್ದು, ಅದರ ಚಕ್ರಕ್ಕೆ ಸಿಲುಕಿದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟ ಘಟನೆ ಮಂಗಳವಾರ ನಡೆದಿದೆ.
ಒರಿಸ್ಸಾ ಮೂಲಕ ಮುಕುಟ್ ಟಿರ್ಕಿ (16) ಅವರು ಮೃತ ವ್ಯಕ್ತಿಯಾಗಿದ್ದಾರೆ. ವಿಟ್ಲಮೂಡ್ನೂರು ಗ್ರಾಮದ ಪೈಸಾರಿ ಎಂಬಲ್ಲಿ ಅಜ್ಜಿನಡ್ಕ ಚಂದಳಿಕೆ ರಸ್ತೆಯಲ್ಲಿ ಯಂತ್ರೋಪಕರಣವಾದ ಕಂಪ್ರೆಷರ್ ಟ್ರಾಕ್ಟರನ್ನು ಅದರ ಚಾಲಕ ರಘು ಬಿಟ್ಟುಕೊಂಡು ಹೋಗುವ ಸಮಯದಲ್ಲಿ ಈತ ಟೂಲ್ಸ್ ಬಾಕ್ಸ್ ಮೇಲೆ ಕುಳಿತಿದ್ದ ಎನ್ನಲಾಗಿದೆ. ಆಯ ತಪ್ಪಿ ಟ್ರಾಕ್ಟರ್ನಿಂದ ಕೆಳಗೆ ಬಿದ್ದು ಹಿಂಬದಿ ಚಕ್ರ ಚಲಿಸಿದ ಪರಿಣಾಮ ತಲೆಗೆ ಹಾಗೂ ಕಾಲುಗಳಿಗೆ ಗಂಭೀರ ಗಾಯಗೊಂಡು ದೇರಳಕಟ್ಟಿ ಕೆ.ಎಸ್ ಹೆಗಡೆ ಆಸ್ವತ್ರೆಗೆ ದಾಖಲಿಸಲಾಗಿತ್ತು. ಚಿಕ್ಸಿತ್ಸೆ ಫಲಕಾರಿಯಾಗದೇ ಮೃತ ಪಟ್ಟ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





