


ಬಂಟ್ವಾಳ: ಸ್ಯಾಕ್ಸೊಪೋನ್ ವಾದಕ ಕದ್ರಿ ಗೋಪಾಲನಾಥ್ ಅವರಿಗೆ ಶ್ರದ್ಧಾಂಜಲಿ ಸಭೆಯು ಬುಧವಾರ ಸಜೀಪಮೂಡ ಸುಭಾಷ್ನಗರ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.
ದ.ಕ.ಜಿ.ಪಂ.ಮಾಜಿ ಅಧ್ಯಕ್ಷ ಬಿ.ಸದಾನಂದ ಪೂಂಜಾ ಅವರು ಮಾತನಾಡಿ, ಆದರ್ಶ ಬದುಕಿನ ಮೂಲಕ ಕದ್ರಿ ಗೋಪಾಲನಾಥ್ ಅವರು ಇಡೀ ರಾಷ್ಟçಕ್ಕೆ ಹೆಮ್ಮೆ ತರುವ ಸಾಧನೆ ಮಾಡಿದ್ದಾರೆ. ವಿಶೇಷ ಪರಿಶ್ರಮದ ಮೂಲಕ ಸಾಧನೆ ಮಾಡಿದ ಅವರು ಹುಟ್ಟೂರಿಗೂ ಗೌರವ ತಂದಿದ್ದಾರೆ ಎಂದರು.
ಗೋಪಾಲನಾಥ್ ಪುತ್ರ ಗುರುಪ್ರಸಾದ್ ಕದ್ರಿ, ನೀವು ಯಾವುದೇ ಕ್ಷೆತ್ರಕ್ಕೆ ಹೋಗಿ ಸಾಧನೆ ನಿಮ್ಮ ಗುರಿಯಾಗಬೇಕು ಎಂಬುದು ತಂದೆಯವರ ಕಿವಿ ಮಾತಾಗಿತ್ತು. ಯಾರಿಗೂ ನೋವುಂಟು ಮಾಡದ ಅವರು ಸಾಧನೆಯ ಮೂಲಕವೇ ಎಲ್ಲರ ಮನಗೆದ್ದಿದ್ದರು ಎಂದರು.
ಮಾಜಿ ಜಿ.ಪಂ.ಸದಸ್ಯ ಕೆ.ರಾಧಾಕೃಷ್ಣ ಆಳ್ವ, ಪಾಣೆಮಂಗಳೂರು ಸಿಎ ಬ್ಯಾಂಕ್ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ವೆಂಕಟೇಶ್ವರ ಭಟ್ ಮುಳ್ಳುಂಜ, ಕೆ.ವಸಂತ ಶೆಟ್ಟಿ, ಕೆ.ಸುರೇಂದ್ರ ಮಯ್ಯ ನುಡಿನಮನ ಸಲ್ಲಿಸಿದರು.
ಕದ್ರಿ ಗೋಪಾಲನಾಥ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಜತೆಗೆ ಮೌನಪ್ರಾರ್ಥನೆಯ ಮೂಲಕ ಗೌರವ ಸಲ್ಲಿಸಲಾಯಿತು. ಸಭೆಯಲ್ಲಿ ಕದ್ರಿ ಅವರ ಸಹೋದರರಾದ ಚಂದ್ರನಾಥ್, ರಮೇಶನಾಥ್, ಗಣೇಶನಾಥ್, ಪುತ್ರ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ತಾ.ಪಂ.ಸದಸ್ಯ ಸಂಜೀವ ಪÇಜಾರಿ, ಗಡಿ ಪ್ರಧಾನರಾದ ಕೋಚು ಭಂಡಾರಿ ಯಾನೆ ಮುಂಡಪ್ಪ ಶೆಟ್ಟಿ, ಶ್ರೀಕಾಂತ್ ಶೆಟ್ಟಿ, ದೇವಿಪ್ರಸಾದ್ ಪೂಂಜಾ ಯೂಸೂಫ್ ಕೆ. ಮೊದಲಾದವರು ಉಪಸ್ಥಿತರಿದ್ದರು. ಎಂ.ಸುಬ್ರಹ್ಮಣ್ಯ ಭಟ್ ಪ್ರಸ್ತಾವನೆಗೈದರು.







