Wednesday, October 25, 2023

ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ಚಿಂತನೆ ಸಾಮಾಜಿಕ ಕ್ಷೇತ್ರದಲ್ಲಿ ಮೈಲುಗಲ್ಲು : ಪ್ರಭಾಕರ ಪ್ರಭು.

Must read

ಕರ್ನಾಟಕ ರಾಜ್ಯದಲ್ಲಿನ ಅತೀ ಹೆಚ್ಚು ಆದಾಯ ತಂದು ಕೊಡುವ ಹಿಂದೂ ಧಾರ್ಮಿಕ ದೇವಸ್ಥಾನಗಳಲ್ಲಿ ಸ್ವಂತ ಆದಾಯ ಅಥವಾ ಸರ್ಕಾರದ ಸಹಾಯ ಧನದ ಮೂಲಕ ಹಿಂದೂ ‘ಸಮಾಜದಲ್ಲಿನ ಬಡವರಿಗೆ ಸಾಮೂಹಿಕ ವಿವಾಹ ಏರ್ಪಾಡು ಮಾಡುವ ಯೋಜನೆ ಮೂಲಕ , ವಧು-ವರರಿಗೆ ,ಕರಿಮಣಿ, ಸೀರೆ, ಇನ್ನೀತರ ವಿವಾಹ ಸಂಬಂಧಿಸಿದ ಸಾಹಿತ್ಯ, ಮತ್ತು ಸಾಂಪ್ರಾದಾಯಿಕ ವಾಗಿ ಬೇಕಾಗುವ ಇತರ ವಸ್ತುಗಳನ್ನು ನೀಡುವ ಸರ್ಕಾರದ ಈ ಮಹತ್ವದ ಯೋಜನೆ ಸಾಮಾಜಿಕ ಕ್ಷೇತ್ರದ ಲ್ಲಿ ಹೊಸ ಮೈಲುಗಲ್ಲು ನಿರ್ಮಿಸಿದೆ. ಇದರೊಂದಿಗೆ ಬಡವರು ತಮ್ಮ ತಮ್ಮ ಇಷ್ಟರ್ಥಗಳಿಗೆ ಹುಂಡಿಗೆ ಹಾಕುವ ಹಣ ಬಡವರ ಪಾಲಿಗೆ ಸೇರಲ್ಪಟ್ಟು.
ದೇವಸ್ಥಾನ ಗಳ ಆದಾಯದಿಂದ ಸಾಮಾಜಿಕ ಸುಧಾರಣೆ ಸಾಧ್ಯವಾಗಿ, ಭಕ್ತರಲ್ಲಿ ಧಾರ್ಮಿಕ ಜಾಗೃತಿ ಮೂಡುತ್ತದೆ.

ಈ ನಿಟ್ಟಿನಲ್ಲಿ ದೇವಸ್ಥಾನಗಳ ಲ್ಲಿ ಸಾಮೂಹಿಕ ವಿವಾಹ ಕಲ್ಪನೆ ಯೊಂದಿಗೆ ಹೊಸ ರೂಪ ನೀಡಿದ ರಾಜ್ಯದ ಮುಜರಾಯಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಯವರ ಕಾರ್ಯ ಶ್ಲಾಘನೀಯವಾಗಿದ್ದು. ಅರ್ಥಿಕವಾಗಿ ಹಿಂದುಳಿದ ವರ ವಧು-ವರರಿಗೆ ಪ್ರೊತ್ಸಾಹ ನೀಡಿ ಸಾಮೂಹಿಕ ವಿವಾಹಕ್ಕೆ ಪ್ರಾಮುಖ್ಯ ನೀಡಿದಂತಾಗುತ್ತದೆ.

More articles

Latest article