Tuesday, October 17, 2023

ಕೆಲಸಕ್ಕೆ ಹೋದ ಅವಿವಾಹಿತ ಯುವತಿ ನಾಪತ್ತೆ

Must read

ಬಂಟ್ವಾಳ: ಅವಿವಾಹಿತ ಯುವತಿಯೋರ್ವಳು ಕಂಪೆನಿಯೊಂದಕ್ಕೆ ಕೆಲಸಕ್ಕೆ ಹೋಗುವುದಾಗಿ ತೆರಳಿದವಳು ಕಾಣೆಯಾದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಅಗ್ರಾರ್ ಸಮೀಪದ ಕಾಂಜೀರ್ ಕೋಡಿ ನಿವಾಸಿ ಪ್ರಕಾಶ್ ದೇವಾಡಿಗ ಅವರ ಮಗಳು ಚೈತ್ರಾ(19) ಕಾಣೆಯಾದ ಯುವತಿ.
ಚೈತ್ರ ಅವಳು ಕಳೆದ ಮೂರು ತಿಂಗಳ ಹಿಂದೆ ಬಿ.ಸಿ.ರೋಡಿನ ಗಾರ್ಮೇಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಇತ್ತೀಚಿಗೆ ಕೆಲಸವಿಲ್ಲದೆ ಮನೆಯಲ್ಲಿಯೇ ಇದ್ದಳು.
ಆ.14 ರಂದು ಸೋಮವಾರ ಚೈತ್ರಾ ಬಿ.ಸಿ.ರೋಡಿನ ಬ್ಯಾಗ್ ಕಂಪೆನಿಗೆ ಕೆಲಸಕ್ಕೆ ಹೋಗುತ್ತೇನೆಂದು ಎಂದು ಹೇಳಿ ಹೋದವಳು , ಸಂಜೆ 6 ಗಂಟೆಗೆ ಮನೆಗೆ ಬರುತ್ತಿದ್ದೆನೆಂದು ಹೇಳಿ ಪೋನ್ ಮಾಡಿದ್ದಳು.
ಅದರೆ ರಾತ್ರಿ 8 ಗಂಟೆಯಾದರೂ ಮನೆಗೆ ಬಾರದೆ ಕಾಣೆಯಾಗಿದ್ದಾಳೆ ಎಂದು ಚೈತ್ರ ಅವರ ತಾಯಿ ಪದ್ಮಾವತಿ ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇವಳ ಬಗ್ಗೆ ಸುಳಿವು ಸಿಕ್ಕರೆ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ತಿಳಿಸುವಂತೆ ಎಸ್.ಐ.ಚಂದ್ರಶೇಖರ್ ತಿಳಿಸಿದ್ದಾರೆ.

More articles

Latest article