ಬಂಟ್ವಾಳ: ಪಂಜಿಕಲ್ಲು ಗ್ರಾಮ‌ ಪಂಚಾಯತ್ ನಲ್ಲಿ ಇಂದು ಪೆಟ್ರೋನೆಟ್ ಎಂ,ಎಚ್,ಬಿ ಲಿಮಿಟೆಡ್ ಇದರ ವತಿಯಿಂದ ಪಂಜಿಕಲ್ಲು ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ 2019-20 ನೇ ಸಾಲಿನ ಸಿ, ಎಸ್, ಆರ್ ಅನುದಾನದಲ್ಲಿ ಸುಮಾರು 5 ಲಕ್ಷ 30 ಸಾವಿರ ವೆಚ್ಚದ ತ್ಯಾಜ್ಯ ವಿಲೇವಾರಿ ವಾಹನ ವನ್ನು ಕೊಡುಗೆಯಾಗಿ ಸಂಸ್ಥೆಯ ಮ್ಯಾನೇಜರ್ ಗಳಾದ ರಾಜನ್ ಮತ್ತು ಮಹೇಶ್ ಹೆಗ್ಡೆ ಇವರು ಗ್ರಾಂ.ಪಂ ಅಧ್ಯಕ್ಷ ರಾದ  ಸುಮಿತ್ರ ಯೋಗೀಶ್ ಕುಲಾಲ್ ಹಾಗೂ ಪಂಚಾಯತ್ ಅಭಿವೃದ್ದಿ ಅಧಿಕಾರಿಯಾದ ವೇದಾ ಇವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪಂಚಾಯತ್ ಮಾಜಿ ಅಧ್ಯಕ್ಷ ರಾದ ಸಂಜೀವ ಪೂಜಾರಿ ಪಿಲಿಂಗಾಲು ಹಾಗೂ ಸದಸ್ಯರುಗಳಾದ ಪೂವಪ್ಪ ಮೆಂಡನ್ ,ಹರೀಶ್ ಪೂಜಾರಿ, ದಯಾನಂದ ಗೌಡ, ಬಾಲಕೃಷ್ಣ ಪೂಜಾರಿ, ರೂಪಾಶ್ರೀ, ಸುಮತಿ, ಶಶಿಕಲಾ ಹಾಗೂ ಸಿಬ್ಬಂದಿಗಳಾದ ಜಗದೀಶ್ ಗೌಡ, ವನಿತಾ, ಯಶವಂತ್ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here