ಉಜಿರೆ: ಧರ್ಮಸ್ಥಳದಲ್ಲಿ ವಸಂತ ಮಹಲ್‌ನಲ್ಲಿ ನಡೆಯುತ್ತಿರುವ ವೀಣೆಯ ಬೆಡಗು-ವೀಣೆ ಶೇಷಣ್ಣ ಸ್ಮಾರಕ ಸಂಗೀತೋತ್ಸವದ ಅಂಗವಾಗಿ ಭಾನುವಾರ ವಿದ್ವಾನ್ ಮಧುರ್ ಬಾಲಸುಬ್ರಹ್ಮಣ್ಯ ಮತ್ತು ಬಳಗದವರಿಂದ ವೃಂದಗಾಯನ ನಡೆಯಿತು.
ಬೆಂಗಳೂರಿನ ವಿದುಷಿ ಸಿ.ಎಸ್. ಉಷಾ ಪಿಟೀಲು ವಾದನದಲ್ಲಿ ಹಾಗೂ ವಿದ್ವಾನ್ ಬಿ.ಎಸ್. ಆನಂದ್ ಮೃದಂಗ ವಾದನದಲ್ಲಿ ಸಹಕರಿಸಿದರು.


ರಶ್ಮಿಕಾರಂತ್, ಉಷಾ ಕಾರಂತ್, ಶ್ರೀಷ, ಶ್ರೀಪತಿರಾವ್, ಉಷಾ, ಎಚ್. ಮತ್ತು ದಿವ್ಯಶ್ರೀ ಅವರ ಸುಶ್ರಾವ್ಯಗಾಯನ ವೃಂದಗಾಯನದ ಸೊಗಡನ್ನು ಹೆಚ್ಚಿಸಿತು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಪ್ರೊ.ಮೈಸೂರು ವಿ.ಸುಬ್ರಹ್ಮಣ್ಯ ಉಪಸ್ಥಿತರಿದ್ದರು.
ಡಿ. ವೀರೇಂದ್ರ ಹೆಗ್ಗಡೆಯವರುಎಲ್ಲಾಕಲಾವಿದರನ್ನು ಗೌರವಿಸಿ ಅಭಿನಂದಿಸಿದರು.

ಪ್ರತಿಭಾವಂತರು ಸಂಸ್ಕೃತಿ, ಸಂಸ್ಕಾರ ಉಳಿಸುವುದರೊಂದಿಗೆ ಸಮಾಜದ ಸಂಘಟನೆಗೆ ಸಹಕರಿಸಬೇಕು.
ಚಿತ್ರಶೀರ್ಷಿಕೆ:ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಆಶೀವರ್ಚನ ನೀಡಿದರು (೧೩ ಯು.ಜೆ.ಆರ್.೨)

ಉಜಿರೆ: ಪ್ರತಿಭಾವಂತರಿಗೆ ಸಮಾಜದಲ್ಲಿಉನ್ನತ ಸ್ಥಾನಮಾನದೊರಕುತ್ತದೆ. ಅವರು ಸಂಸ್ಕೃತಿ, ಸಂಸ್ಕಾರ ಉಳಿಸುವುದರೊಂದಿಗೆ ಸಮಾಜದ ಸಂಘಟನೆ ಮತ್ತು ಬಲವರ್ಧನೆಗೆ ಸಹಕರಿಸಬೇಕುಎಂದು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಅವರು ಭಾನುವಾರಉಜಿರೆಯಲ್ಲಿ ಶ್ರೀ ಜನಾರ್ದನ ಸ್ವಾಮಿದೇವಸ್ಥಾನದಲ್ಲಿದೇವರಿಗೆ ಲಕ್ಷ ತುಳಸಿ ಅರ್ಚನೆ ಬಳಿಕ ಬೆಳ್ತಂಗಡಿ ತಾಲ್ಲೂಕು ತುಳು ಶಿವಳ್ಳಿ ಸಭಾದಆಶ್ರಯದಲ್ಲಿ ಪ್ರತಿಭಾವಂತರನ್ನು ಸನ್ಮಾನಿಸಿ ಆಶೀರ್ವದಿಸಿದರು.
ಪ್ರತಿಭಾವಂತ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಿಉನ್ನತ ಸ್ಥಾನ ಪಡೆಯಬೇಕು.ನಮ್ಮ ಸನಾತನ ಪರಂಪರೆ, ಸಂಸ್ಕಾರ, ಆಚಾರ-ವಿಚಾರಗಳನ್ನು ಕಡೆಗಣಿಸಬಾರದು.ಕ್ರೀಡಾಕ್ಷೇತ್ರದಲ್ಲಿಯೂ ಹೆಚ್ಚಿನ ಸಾಧನೆ ಮಾಡಬೇಕೆಂದು ಸ್ವಾಮೀಜಿ ಸಲಹೆ ನೀಡಿದರು.
ಕ್ರೀಡಾಕ್ಷೇತ್ರದಲ್ಲಿಉನ್ನತಸಾಧನೆ ಮಾಡಿದಋತ್ವಿಕ್‌ಅಲೆವೂರಾಯ ಮತ್ತುಚೆಸ್‌ಚಾಂಪಿಯನ್ ಈಶಾ ಶರ್ಮಾಅವರನ್ನುಗೌರವಿಸಲಾಯಿತು.
ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ, ಗಾಯತ್ರಿ ಶ್ರೀಧರ್ ಮತ್ತುಡಾ.ಎಂ.ಎಂ. ದಯಾಕರ ಉಪಸ್ಥಿತರಿದ್ದರು.
ಶರತ್‌ಕೃಷ್ಣಪಡ್ವೆಟ್ನಾಯ ಸ್ವಾಗತಿಸಿದರು. ಶ್ರೀಧರ ಕೆ.ವಿ. ಧನ್ಯವಾದವಿತ್ತರು. ಮುರಳಿಕೃಷ್ಣ ಆಚಾರ್ಯಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here