

ಮಂಗಳೂರು: ಜೇಸಿಐ ಮಂಗಳೂರು ಲಾಲ್ ಬಾಗ್ ಆತಿಥ್ಯದಲ್ಲಿ ನಡೆದ 2019 ನೇ ಸಾಲಿನ ವಲಯ ಸಮ್ಮೇಳನ ಸಂಚಯದಲ್ಲಿ ಜೇಸಿ ರಾಜೇಶ್ ಪುಂಜಾಲಕಟ್ಟೆಯವರಿಗೆ ವಲಯಾಧ್ಯಕ್ಷ ಜೇಸಿಐ ಪಿಪಿಪಿ ಅಶೋಕ್ ಚುಂತಾರ್ ರವರು ವಲಯದ ಅತ್ಯುತ್ತಮ ವಲಯಾದಿಕಾರಿ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭ ದಲ್ಲಿ ನಿಕಟ ಪೂರ್ವಾ ವಲಯಾದ್ಯಕ್ಷ ರಾಕೇಶ್ ಕುಂಜೂರು, ಪೂರ್ವಾ ರಾಷ್ಟ್ರೀಯ ಉಪಾಧ್ಯಕ್ಷ ಮುರಳಿ ಶ್ಯಾಮ್, ಪೂರ್ವಾ ವಲಯಾದ್ಯಕ್ಷ ಸಂಪತ್ ಬಿ ಸುವರ್ಣ ಪೂರ್ವ ವಲಯಾದಿಕಾರಿಗಳಾದ ರಾಧಾಕೃಷ್ಣ ಬಂಟ್ವಾಳ್ , ವಲಯ ಉಪಾಧ್ಯಕ್ಷ ಜಯೇಶ್ ಬರೆಟ್ಟೊ , ಜೇಸಿಐ ಮಡಂತ್ಯಾರು ಘಟಕದ ಅಧ್ಯಕ್ಷ ಮತ್ತು ಸದಸ್ಸ್ಯರು ಹಾಗೂ ಹಲವಾರು ವಲಯದ ನಾಯಕರು, ಗಣ್ಯರು ಉಪಸ್ಥಿತರಿದ್ದರು.
ರಾಜೇಶ್ ಪಿ ಪುಂಜಾಲಕಟ್ಟೆಯವರು 2013 ರಲ್ಲಿ ಜೇಸಿಐ ಮಡಂತ್ಯಾರು ಘಟಕಕ್ಕೆ ಸೆರ್ಪಡಗೊಂಡು ಘಟಕದ ವಿವಿದ ಹುದ್ದೆಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿ 2017 ನೇ ಸಾಲಿನ ಮಡಂತ್ಯಾರು ಜೇಸಿ ಘಟಕದ ಅದ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದರು .








